×
Ad

ಮಥುರಾದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ: ಪೊಲೀಸ್‌ ಮಾಹಿತಿ

Update: 2022-08-07 10:21 IST
Photo:PTI

ಮಥುರಾ: ಮಥುರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಅತ್ಯಾಚಾರ ಎಸಗಿ ಘಟನೆಯ ವೀಡಿಯೊ  ಮಾಡಿ ಮಹಿಳೆಯ ಅತ್ತೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಮೇ 28 ರಂದು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿಯನ್ನು ಭರ್ತಿ ಮಾಡಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗಿದ್ದಾಗ ಕೇಂದ್ರದ ನಿರ್ವಾಹಕರು, ಕಂಪ್ಯೂಟರ್ ಆಪರೇಟರ್, ಅಂಗಡಿ ಮಾಲಿಕ ಹಾಗೂ ಇನ್ನೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಆರೋಪಿಗಳಲ್ಲಿ ಒಬ್ಬಾತ ಮಹಿಳೆಯ ಅತ್ತೆಗೆ ವೀಡಿಯೊ ಕಳುಹಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್ಪಿ (ಗ್ರಾಮೀಣ) ಶ್ರೀಶ್ ಚಂದ್ರ ಹೇಳಿದ್ದಾರೆ.

ಪ್ರಮುಖ ಆರೋಪಿಯು ಮಹಿಳೆಯ ಪೋಷಕರು ವಾಸಿಸುತ್ತಿದ್ದ ಅಲಿಗಢ ಜಿಲ್ಲೆಯ ಅದೇ ಗ್ರಾಮಕ್ಕೆ ಸೇರಿದವನು. ಮಹಿಳೆ ಹಾಗೂ  ಆರೋಪಿ ಕೂಡ ಒಟ್ಟಿಗೆ ಓದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News