ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತದ ಎಲ್ದೋಸ್ ಪಾಲ್‌ಗೆ ಚಿನ್ನ, ಅಬೂಬಕರ್‌ಗೆ ಬೆಳ್ಳಿ

Update: 2022-08-07 11:40 GMT
Photo credit: Twitter/@SamreenRazz

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಎರಡು ಪದಕ ಲಭಿಸಿದೆ.  ಎಲ್ದೋಸ್ ಪಾಲ್ 17.03 ಮೀಟರ್‌ನ ಅತ್ಯುತ್ತಮ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02 ಮೀ. ಜಿಗಿದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಪ್ರವೀಣ್ ಚತುರ್ವೇದಿ ನಾಲ್ಕನೇ ಸ್ಥಾನ ಪಡೆದು ಕೂದಲೆಳೆ ಅಂತರದಿಂದ ಕಂಚಿನ ಪದಕದಿಂದ ವಂಚಿತರಾದ ಕಾರಣ ಭಾರತವು ಕ್ಲೀನ್ ಸ್ವೀಪ್ ಸಾಧಿಸುವ ಅವಕಾಶವನ್ನು ಕಳೆದುಕೊಂಡಿತು.

 ಪಾಲ್ ಮೂರನೇ ಪ್ರಯತ್ನದಲ್ಲಿ 17 ಮೀಟರ್ ಮಾರ್ಕ್‌ನ್ನು ಕ್ರಮಿಸಿದರು.ಅಬೂಬಕರ್ ಸ್ಪರ್ಧೆಯುದ್ದಕ್ಕೂ ತನ್ನ ಪ್ರದರ್ಶನ ಮಟ್ಟ ಸುಧಾರಿಸಿಕೊಳ್ಳುತ್ತಾ ಸಾಗಿದ್ದು, ತನ್ನ ಐದನೇ ಪ್ರಯತ್ನದಲ್ಲಿ 17.02 ಮೀ.ದೂರಕ್ಕೆ ಜಿಗಿದರು.
ಚತುರ್ವೇದಿ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದರೂ ಪ್ರತಿಸ್ಪರ್ಧಿ ಜಾಹ್-ನೈ-ಪೆರಿಚ್‌ಚೆಫ್ ಕಂಚಿನ ಪದಕ ಜಯಿಸಿದರು.

ಪ್ರಸಕ್ತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತ್ಲೆಟಿಕ್ಸ್ ವಿಭಾಗದಲ್ಲಿ ಪಾಲ್ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. 2018ಕ್ಕಿಂತ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಅತ್ಲೀಟ್‌ಗಳು ಇನ್ನಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News