ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ಸೇನೆಯಿಂದ ಭೀಕರ ವೈಮಾನಿಕ ದಾಳಿ: ಟ್ವಿಟರಿನಲ್ಲಿ ಟ್ರೆಂಡ್‌ ಆದ #GazaUnderAttack

Update: 2022-08-07 18:13 GMT

ಜೆರುಸಲೇಂ: ಗಾಝಾದಲ್ಲಿ ನಡೆಸಿದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 260 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು 31 ಮಂದಿ ಮೃತಪಟ್ಟಿದ್ದಾರೆ. ಗಾಝಾ ಪಟ್ಟಿಯ ಮೇಲಿನ ದಾಳಿಗೆ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಟ್ವಿಟರಿನಲ್ಲಿ #GazaUnderAttack ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಜನಾಂಗೀಯವಾದಿ ಕೊಲೆಗಡುಕ ಇಸ್ರೇಲ್‌ ಪ್ರಭುತ್ವವನ್ನು ಬಹಿಷ್ಕರಿಸಿ. ರಷ್ಯನ್‌ ಭಯೋತ್ಪಾದನಾ ವಿರೋಧಿ ಲಾಬಿಯು (ಈಗ) ಕಿವುಡಾಗಿದೆ. ಸಂತ್ರಸ್ತ ಮಕ್ಕಳು ಬಿಳಿಯರಾಗಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಅಥವಾ, ಅಮೇರಿಕಾ ಪ್ರಾಯೋಜಿತ ಆಯುಧಧಾರರಿಂದ ಅವರು (ಗಾಝಾ ಜನತೆ) ಕೊಲ್ಲಲ್ಪಡದಿದ್ದರೆ ದೊಡ್ಡ ಮಟ್ಟದಲ್ಲಿ (ವಿರೋಧದ) ದನಿ ಏಳುತ್ತಿತ್ತು ಎಂದು ಸ್ವತಂತ್ರ ಡಬ್ಲಿನ್ ಸಿಟಿ ಕೌನ್ಸಿಲರ್ ಸಿಯಾರೆನ್‌ ಪೆರಿ (Cllr Cieran Perry) ಟ್ವೀಟ್‌ ಮಾಡಿದ್ದಾರೆ.

 ಉಕ್ರೇನ್‌ ಮೇಲೆ ರಷ್ಯಾ ದಂಡೆತ್ತಿ ಹೋದಾಗ ಉಂಟಾದ ವಿರೋಧ ಇಸ್ರೇಲ್‌ ವಿರುದ್ಧ ಯಾಕೆ ಏಳುವುದಿಲ್ಲ ಎಂದೂ ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಂತರಾಷ್ಟ್ರೀಯ ಮಾಧ್ಯಮಗಳು ಇಸ್ರೇಲಿ ಕ್ರೂರತನವನ್ನು ತೋರಿಸುವುದಿಲ್ಲ ಎಂದೂ ಹಲವರು ಆರೋಪಿಸಿದ್ದಾರೆ.  

ಗಾಝಾ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಪೆಲೆಸ್ತೀನ್ ಉಗ್ರರ ಸಂಘಟನೆ ಇಸ್ರೇಲ್ ನಗರದ ಮೇಲೆ ರಾಕೆಟ್ ದಾಳಿ ನಡೆಸುವುದರೊಂದಿಗೆ ಈ ಪ್ರದೇಶದಲ್ಲಿ ಗಡಿಯುದ್ಧಕ್ಕೂ ಸುಮಾರು 1 ವರ್ಷದಿಂದ ಶಾಂತ ಪರಿಸ್ಥಿತಿ ಕದಡಿದ್ದು ಉದ್ವಿಗ್ನತೆ ಮುಂದುವರಿದಿದೆ

 ಗಾಝಾ ಸಿಟಿಯ ಬಹುಮಹಡಿ ಕಟ್ಟಡವೊಂದರ ಮೇಲೆ ಹಗಲಿನಲ್ಲಿ ನಡೆಸಿದ ವಿಶೇಷ ವೈಮಾನಿಕ ಕಾರ್ಯಾಚರಣೆಯಲ್ಲಿ ಪೆಲೆಸ್ತೀನ್ ಉಗ್ರರ ತಂಡದ ಸೀನಿಯರ್ ಕಮಾಂಡರ್ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಮಿಲಿಟರಿ ತಿಳಿಸಿದೆ.

ಇಸ್ರೇಲ್‌ ವೈಮಾನಿಕ ದಾಳಿಯಿಂದಾಗಿ ಗಾಝಾ ಪಟ್ಟಿಯಲ್ಲಿ ಮೃತರ ಸಂಖ್ಯೆ 31 ಕ್ಕೆ ಏರಿದ್ದು, 260 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು Aljazeera.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News