ಕಾಮನ್ವೆಲ್ತ್ ಗೇಮ್ಸ್ ನಿಂದ 10 ಶ್ರೀಲಂಕನ್ನರು ನಾಪತ್ತೆ

Update: 2022-08-07 18:24 GMT
photo : twitter

ಕೊಲಂಬೊ, ಆ.7: ಇಂಗ್ಲೆಂಡಿನ ಬರ್ಮಿಂಗ್ಹಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿರುವ ಶ್ರೀಲಂಕಾದ ತಂಡದ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶ್ರೀಲಂಕಾದ ಉನ್ನತ ಕ್ರೀಡಾ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ರವಿವಾರ ವರದಿ ಮಾಡಿದೆ. 9 ಅಥ್ಲೀಟ್ಗಳು ಹಾಗೂ ಅವರ ಮ್ಯಾನೇಜರ್, ಸ್ಪರ್ಧೆ ಮುಗಿದ ಬಳಿಕ ನಾಪತ್ತೆಯಾಗಿದ್ದಾರೆ. ಜೂಡೊ ಸ್ಪರ್ಧಿ ಚಾಮಿಲಾ ದಿಲಾನಿ, ಆಕೆಯ ಮ್ಯಾನೇಜರ್ ಅಸೆಲಾ ಡಿಸಿಲ್ವಾ, ಕುಸ್ತಿಪಟು ಶನಿತ್ ಚತುರಂಗ ಕಳೆದ ವಾರ ನಾಪತ್ತೆಯಾಗಿದ್ದರು. ಆ ಬಳಿಕ ಮತ್ತೆ 7 ಮಂದಿ ನಾಪತ್ತೆಯಾಗಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ. ಬಹುಷಃ ಅವರು ಬ್ರಿಟನ್ನಲ್ಲಿ ಉಳಿದುಕೊಳ್ಳ ಬಯಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇವರಲ್ಲಿ 6 ಮಂದಿಯನ್ನು ಬ್ರಿಟನ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಅವರು ಕಾನೂನನ್ನು ಉಲ್ಲಂಘಿಸದ ಕಾರಣ, ಮತ್ತು 6 ತಿಂಗಳು ಮಾನ್ಯತೆ ಇರುವ ವೀಸಾ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾಣೆಯಾದವರ ಪಾಸ್ಪೋರ್ಟ್ ನಮ್ಮ ಬಳಿಯೇ ಇದ್ದ ಕಾರಣ ಅವನ್ನು ಹಿಂದಿರುಗಿಸಲು ಪೊಲೀಸರು ಸೂಚಿಸಿದ್ದಾರೆ, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ನೀಡಿಲ್ಲ’ ಎಂದು ಶ್ರೀಲಂಕಾದ ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News