ನರ್ಸಿಂಗ್ ವಿದ್ಯಾರ್ಥಿಗಳಿಗೆ ಗ್ರಾಮೀಣ ಚಟುವಟಿಕೆ ಬಗ್ಗೆ ಮಾಹಿತಿ ಶಿಬಿರ

Update: 2022-08-08 14:11 GMT

ಮಣಿಪಾಲ, ಆ.8: ಮಣಿಪಾಲದ ಸ್ಕೂಲ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿ ಗಳಿಗೆ  ಗ್ರಾಮೀಣ ಅಭಿವೃದ್ದಿ ಕ್ಷೇತ್ರದ ಬಗ್ಗೆ ಪರಿಚಯ ಮತ್ತು ಮಾಹಿತಿ ಶಿಬಿರ ಮಣಿಪಾಲ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಜರಗಿತು.  

ಶಿಬಿರವನ್ನು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಉದ್ಘಾಟಿಸಿದರು. ವೇದಿಕೆಯಲ್ಲಿ ಮಣಿಪಾಲ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ. ಲೀನಾ ಸಿಕ್ವೇರಾ,  ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ. ಲಕ್ಷ್ಮೀ ಬಾಯಿ ಉಪಸ್ಥಿತರಿದ್ದರು.

ಗ್ರಾಮೀಣ ಜೀವನ ಮತ್ತು ಮಾನಸಿಕ ಆರೋಗ್ಯ, ಆಯುರ್ವೇದ ಮತ್ತು ಆರೋಗ್ಯ, ಆಟಿಸಂ,  ಸ್ವಉದ್ಯೋಗದ ಅವಕಾಶಗಳು, ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳು ಮತ್ತು ಕೈತೋಟ-ಟೆರೇಸ್ ಗಾರ್ಡನಿಂಗ್, ಗ್ರಾಮೀಣ ಜನರಿಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯ  ಮತ್ತು  ನವೀಕರಿಸಬಹುದಾದ ಇಂಧನ  ವಿಷಯಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿರೂಪಾಕ್ಷ ದೇವರುಮನೆ, ಡಾ. ಶ್ರೀಧರ ಬಾಯರಿ, ಮನೋಹರ ಕಟ್ಗೇರಿ, ಗಿರೀಶ್, ಕೀರ್ತೇಶ್, ರಮ್ಯಾ, ಡಾ. ಧನಂಜಯ, ಲಕ್ಷ್ಮೀಬಾಯಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.  ಸುಮಾರು 60 ಮಂದಿ ನರ್ಸಿಂಗ್ ವಿದ್ಯಾರ್ಥಿಗಳು ೫ ದಿನಗಳ ಮಾಹಿತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News