ವ್ಯಕ್ತಿ ನಾಪತ್ತೆ

Update: 2022-08-08 15:16 GMT
ಸಾಜು ಕೆ.ಎಂ

ಉಡುಪಿ, ಆ.೮: ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಬೀಸಿನಪಾರೆ ನಿವಾಸಿ ಸಾಜು ಕೆ.ಎಂ (47) ಎಂಬವರು ಜುಲೈ 31ರಂದು ಬೆಳಗ್ಗೆ 8.45ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 

೫ ಅಡಿ ೬ ಇಂಚು ಎತ್ತರ, ಸಪೂರ ಶರೀರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ತುಳು ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: ೦೮೨೫೪-೨೫೮೨೩೩, ಮೊ.ನಂ: ೯೪೮೦೮೦೫೪೬೦, ಬೈಂದೂರು ವೃತ್ತನಿರೀಕ್ಷಕರ ಕಚೇರಿ ದೂ.ಸಂಖ್ಯೆ: ೦೮೨೫೪-೨೫೧೦೩೧, ಮೊ.ನಂ: ೯೪೮೦೮೦೫೪೩೪, ಕಂಟ್ರೋಲ್ ರೂಂ :೧೦೦, ದೂ.ಸಂಖ್ಯೆ: ೦೮೨೦-೨೫೨೬೪೪೪ ಅನ್ನು ಸಂಪರ್ಕಿಸಬಹುದು ಎಂದು ಕೊಲ್ಲೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News