ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳು ಹಿಂದೂ ಪುರುಷರಲ್ಲಿ ಹೆಚ್ಚು: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

Update: 2022-08-09 13:35 GMT

ಹೊಸದಿಲ್ಲಿ: ಭಾರತದಲ್ಲಿ ಉಳಿದೆಲ್ಲಾ ಧರ್ಮದ ಪುರುಷರಿಗೆ ಹೋಲಿಸಿದರೆ ಹಿಂದೂ ಧರ್ಮೀಯ ಪುರುಷರು ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5)ಯನ್ನು ವಿಶ್ಲೇಷಿಸಿರುವ TheWire.in ವರದಿ ಹೇಳಿದೆ. ನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಸಿಖ್‌, ಕ್ರಿಶ್ಚಿಯನ್‌, ಬೌದ್ಧರು, ಮುಸ್ಲಿಮ್‌, ಜೈನರು ಇದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ದತ್ತಾಂಶದ ಕುರಿತು ದಿ ವೈರ್‌ನ ವಿಶ್ಲೇಷಣಾ ವರದಿಯು ಹಿಂದೂ ಪುರುಷರು, ವಿವಾಹೇತರ ಸಂಬಂಧವನ್ನು ಅಥವಾ ಲಿವ್-ಇನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಜೀವಿತಾವಧಿಯಲ್ಲಿ 2.2 ಸರಾಸರಿ ಸಂಖ್ಯೆಯ ಲೈಂಗಿಕ ಸಂಗಾತಿಗಳನ್ನು ಹೊಂದಿದ್ದರು ಎಂದು ಹೇಳಿದೆ. ಈ ಸರಾಸರಿ ಸಂಖ್ಯೆಯು ಸಿಖ್‌ ಮತ್ತು ಕ್ರಿಶ್ಚಿಯನ್ನರಲ್ಲಿ 1.9 ಇದ್ದರೆ, ಬೌದ್ಧರು ಮತ್ತು ಮುಸ್ಲಿಮರಲ್ಲಿ 1.7 ಇದೆ. ಜೈನರಲ್ಲಿ ಅತ್ಯಂತ ಕಡಿಮೆ ಇದ್ದು 1.1 ಸರಾಸರಿ ಇದೆ.

2019-20ರಲ್ಲಿ ಕೇಂದ್ರ ಸರ್ಕಾರಕ್ಕಾಗಿ ಮುಂಬೈ ಮೂಲದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್ ಈ ಸಮೀಕ್ಷೆಯನ್ನು ನಡೆಸಿದೆ. 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1.01 ಲಕ್ಷ ಪುರುಷರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಈ ಸಮೀಕ್ಷೆಗಾಗಿ 8.25 ಲಕ್ಷ ಜನರನ್ನು ಸಂಪರ್ಕಿಸಲಾಗಿತ್ತು.

NFHS-5 ನ ಸಂಶೋಧನೆಗಳು NFHS-4 (2015-16 ರ ನಡುವೆ ನಡೆಸಲಾದ) ಸಂಶೋಧನೆಗಿಂತ ವಿಭಿನ್ನವಾಗಿದೆ. NFHS-4 ನಲ್ಲಿ ಲಭಿಸಿದ ಅಂಕಿಅಂಶಗಳ ಪ್ರಕಾರ ಕ್ರಿಶ್ಚಿಯನ್ ಪುರುಷರು (2.4) ಅತಿ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದವರಾಗಿದ್ದರು. ನಂತರದ ಸ್ಥಾನದಲ್ಲಿ ಬೌದ್ಧರು ಮತ್ತು ಮುಸ್ಲಿಮರು (2.1) ಇದ್ದರೆ, ಹಿಂದೂಗಳು (1.9) ಅದರ ನಂತರದ ಸ್ಥಾನದಲ್ಲಿದ್ದರು. ಒಟ್ಟಾರೆ, ಪುರುಷರಲ್ಲಿ ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳಿರುವ  ಪ್ರವೃತ್ತಿಯು NFHS-4 ಅವಧಿಯ 1.9 ರಿಂದ NFHS-5 ಅವಧಿಯಲ್ಲಿ 2.1 ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News