ಬಂಟ್ವಾಳ: ಆ.13ರಂದು 'ಅಮೃತ ಭಾರತಿಗೆ ಗಾನ ನುಡಿಯ ದೀವಿಗೆ' ಕಾರ್ಯಕ್ರಮ

Update: 2022-08-10 04:51 GMT

ಬಂಟ್ವಾಳ : 75ನೇ ಸ್ವಾತಂತ್ರ್ಯ ಉತ್ಸವದ ಅಮೃತಮಹೋತ್ಸವ ಆಚರಣೆಯ ಅಂಗವಾಗಿ 'ಅಮೃತ ಭಾರತಿಗೆ ಗಾನ ನುಡಿಯ ದೀವಿಗೆ' ಎಂಬ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಆಗಸ್ಟ್ 13ರಂದು ಆಯೋಜಿಸಲಾಗಿದೆ. 

ಈ ಕುರಿತು ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು, ಅಂದು ಬೆಳಗ್ಗೆ 9:30ಕ್ಕೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬಂಟರ ಭವನದವರೆಗೆ ಬೃಹತ್ ವಾಹನ ಜಾಥಾ ನಡೆಯಲಿದೆ. 

ಬೆಳಗ್ಗೆ 10:30ಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಯ ಕಲಿಗಳು ಎಂಬ ಕುರಿತು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರಿಂದ ಉಪನ್ಯಾಸ, ಬಳಿಕ ಜಗದೀಶ ಆಚಾರ್ಯ ಮತ್ತು ಬಳಗದವರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು. 

ಸರಕಾರಿ ಅಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಸಹಿತ ದೇಶಭಕ್ತ ಸಾರ್ವಜನಿಕರು ಇಲ್ಲಿ ಭಾಗವಹಿಸಲಿದ್ದು ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಜಿಲ್ಲೆಯ ಕೊಡುಗೆಯನ್ನೂ ನೆನಪಿಸುವ ಕಾರ್ಯಕ್ರಮವಾಗಿದೆ ಎಂದರು. 

ಈ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ, ಮತ ಬೇಧ ಮರೆತು ಎಲ್ಲ ಭಾರತೀಯರೂ ರಾಷ್ಟ್ರಭಕ್ತರೂ ಒಗ್ಗೂಡಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದರು. 

ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪಕ್ಷದ ಪ್ರಮುಖರಾದ ಡೊಂಬಯ ಅರಳ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News