ವೈದ್ಯಕೀಯ ಆಧಾರಗಳ ಹಿನ್ನೆಲೆಯಲ್ಲಿ ಪಿ.ವರವರ ರಾವ್‌ ಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

Update: 2022-08-10 09:11 GMT

ಹೊಸದಿಲ್ಲಿ: ಫೆಬ್ರವರಿ 22, 2021 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಆರು ತಿಂಗಳ ಜಾಮೀನನ್ನು ಕಾಯಂಗೊಳಿಸುವ ಮೂಲಕ ಭೀಮಾ ಕೋರೆಗಾಂವ್(Bhima Koregaon) ಪ್ರಕರಣದಲ್ಲಿ ಪಿ ವರವರ ರಾವ್(Varavara Rao) ರಿಗೆ ಜೈಲಿನಿಂದ ಹೊರಗೆ ಉಳಿಯಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.

ಈ ಅವಧಿಯಲ್ಲಿ, ರಾವ್ ಅವರು "ಪ್ರಕರಣವು ಬಾಕಿ ಇರುವ ವಿಚಾರಣಾ ನ್ಯಾಯಾಲಯದ ಪ್ರಾದೇಶಿಕ ವ್ಯಾಪ್ತಿಯನ್ನು ತೊರೆಯುವುದಿಲ್ಲ ಮತ್ತು ಅವರ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಸಾಕ್ಷಿಗಳೊಂದಿಗೆ ಸಂಪರ್ಕದಲ್ಲಿರದಂತೆ ಅಥವಾ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸದಂತೆ" ನ್ಯಾಯಾಲಯ ಅವರನ್ನು ನಿರ್ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News