×
Ad

ತೈವಾನ್ ವಿರುದ್ಧ ಬೀಜಿಂಗ್ ನ ‘ಆಕ್ರಮಣಕಾರಿ ವರ್ತನೆ’:ವಿವರಣೆ ನೀಡುವಂತೆ ಚೀನಿ ರಾಯಭಾರಿಗೆ ಬ್ರಿಟನ್ ಸಮನ್ಸ್

Update: 2022-08-10 23:19 IST

 ಲಂಡನ್,ಆ.10: ಇತ್ತೀಚಿನ ದಿನಗಳಲ್ಲಿ ತೈವಾನ್ ವಿರುದ್ಧ ಬೀಜಿಂಗ್ ನ ಆಕ್ರಮಣಕಾರಿ ವರ್ತನೆ ಹಾಗೂ ಉದ್ವಿಗ್ನತೆಯನ್ನು ಉಲ್ಬಣಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ಬ್ರಿಟನ್, ತನ್ನ ದೇಶದಲ್ಲಿನ ಚೀನಾ ರಾಯಭಾರಿಗೆ ಸಮನ್ಸ್ ನೀಡಿದೆ.

ತೈವಾನ್ ವಾಯುವಲಯದಲ್ಲಿ ಚೀನಾದ ಕ್ಷಿಪಣಿ ಉಡಾವಣೆ ಹಾಗೂ ಒಳನುಸುಳುವಿಕೆಯ ಬಗ್ಗೆ ವಿವರಣೆ ನೀಡುವಂತೆ ಬ್ರಿಟನ್ ನ ಹಾಲಿ ವಿದೇಶಾಂಗ ಕಾರ್ಯದರ್ಸಿ ಲಿಝ್ ಟ್ರೂಸ್ ಅವರು ಚೀನಾದ ರಾಯಭಾರಿ ಝೆಂಗ್ ಝೆಗುವಾಂಗ್ ಅವರಿಗೆ, ಕೇಳಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಲಿಝ್ ಟ್ರುಸ್ ಅವರು, ಬ್ರಿಟನ್ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿದ್ದು ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ.
  ‘‘ತೈವಾನ್ನ ಸುತ್ತಮುತ್ತಲಿನ ಪ್ರಾಂತದಲ್ಲಿ ಚೀನಾವು ಉದ್ವಿಗ್ನತೆಯನ್ನು ಹೆಚ್ಚಿಸಿರುವುದನ್ನು ಬ್ರಿಟನ್ ಹಾಗೂ ಪಾಲುದಾರ ರಾಷ್ಟ್ರಗಳು ಪ್ರಬಲವಾಗಿ ಖಂಡಿಸಿವೆ. ಈ ಬಗ್ಗೆ ಇತ್ತೀಚಿನ ಜಿ7 ಶೃಂಗಸಭೆಯಲ್ಲಿ ಹೊರಡಿಸಲಾದ ಹೇಳಿಕೆಯಲ್ಲಿಯೂ ಇದು ವ್ಯಕ್ತವಾಗಿದೆ’’ ಎಂದು ಟ್ರುಸ್ ಅವರು ಬುಧವಾರ ತಿಳಿಸಿದ್ದಾರೆ.
  ‘‘ ತನ್ನ ದೇಶದ ಕೃತ್ಯಗಳ ಬಗ್ಗೆ ವಿವರಿಸುವಂತೆ ನಾನು ಚೀನಿ ರಾಯಭಾರಿಯವರಿಗೆ ಸಮನ್ಸ್ ನೀಡುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇತ್ತೀಚಿನ ತಿಂಗಳುಗಳಲ್ಲಿ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಬೀಜಿಂಗ್ನ ಆಕ್ರಮಣಕಾರಿ ವರ್ತಿಸುತ್ತಿರುವುದನ್ನು ಹಾಗೂ ವಾಕ್ಪ್ರಹಾರ ನಡೆಸುತ್ತಿರುವುದನ್ನು ನಾವು ಕಂಡಿದ್ದೇವೆ.’’ ಎಂದು ಟ್ರುಸ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ಉಯಿಘುರ್ ಮುಸ್ಲಿಮರನ್ನು ಹಾಗೂ ಹಾಂಕಾಂಗ್ನ ಪ್ರಜಾಪ್ರಭುತ್ವ ಹೋರಾಟಗಾರರನ್ನು ಚೀನಾವು ದಮನಿಸುತ್ತಿರುವುದನ್ನು ಬ್ರಿಟಿಶ್ ಸರಕಾರ ಖಂಡಿಸಿದ ಬಳಿಕ ಚೀನಾ ಹಾಗೂ ಬ್ರಿಟನ್ ನಡುವಿನ ಬಾಂಧವ್ಯ ಹಳಸಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News