7 ಬಿಲಿಯನ್‌ ಡಾಲರ್ ಮೌಲ್ಯದ ಟೆಸ್ಲಾ ಷೇರು ಮಾರಿದ ಎಲಾನ್ ಮಸ್ಕ್

Update: 2022-08-11 02:20 GMT
ಎಲಾನ್ ಮಸ್ಕ್

ನ್ಯೂಯಾರ್ಕ್: ಟ್ವಿಟ್ಟರ್ ಇನ್‍ಕಾರ್ಪೊರೇಷನ್‍ನ ಖರೀದಿ ಒಪ್ಪಂದವನ್ನು ಜಾರಿಗೊಳಿಸುವಂತೆ ಶತಕೋಟ್ಯಧಿಪತಿ ಎಲಾನ್ ಮಸ್ಕ್ ಅವರಿಗೆ ವಿಚಾರಣಾ ನ್ಯಾಯಾಲಯ ಕಡ್ಡಾಯಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಟೆಸ್ಲಾ ಇನ್‍ಕಾರ್ಪೊರೇಷನ್‍ನ 6.9 ಬಿಲಿಯನ್‌ ಡಾಲರ್ ಮೌಲ್ಯದ ಷೇರುಗಳನ್ನು ಮಾರಟ ಮಾಡಲು ಮಸ್ಕ್ ಮುಂದಾಗಿದ್ದಾರೆ.

ಟೆಸ್ಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ 7.92 ಬಿಲಿಯನ್‌ ಡಾಲರ್ ಷೇರುಗಳನ್ನು ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಮಾರಾಟ ಮಾಡಿದ್ದಾರೆ ಎಂದು ನಿಯಂತ್ರಣಾತ್ಮಕ ಫೈಲಿಂಗ್‍ನಿಂದ ತಿಳಿದುಬಂದಿದೆ. ಇಷ್ಟಾಗಿಯೂ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿಯ ಶೇಕಡ 15ರಷ್ಟು ಷೇರುಗಳನ್ನು ಹೊಂದಿದ್ದಾರೆ. ಟ್ವಿಟ್ಟರ್ ಒಪ್ಪಂದ ಜಾರಿಗೆ ಬಾರದೇ ಇದ್ದಲ್ಲಿ ಟೆಸ್ಲಾ ಷೇರುಗಳನ್ನು ಮರು ಖರೀದಿ ಮಾಡುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

"ಒಂದು ವೇಳೆ ಒಪ್ಪಂದವನ್ನು ಅಂತಿಮಪಡಿಸುವಂತೆ ಟ್ವಿಟ್ಟರ್ ಬಲವಂತಪಡಿಸಿದರೆ ಹಾಗೂ ಕೆಲ ಈಕ್ವಿಟಿ ಪಾಲುದಾರರು ಸಾಕಷ್ಟು ಮುಂದೆ ಬರದೇ ಇದ್ದಲ್ಲಿ, ಟೆಸ್ಲಾ ಷೇರುಗಳನ್ನು ತುರ್ತಾಗಿ ಮಾರಾಟ ಮಾಡುವುದನ್ನು ತಪ್ಪಿಸಿಕೊಳ್ಳುವುದು ಅಗತ್ಯ" ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲಿ ಟೆಸ್ಲಾ ಷೇರುಗಳ ಬೆಲೆ ಶೇಕಡ 3ರಷ್ಟು ಏರಿಕೆ ಕಂಡು 857.51 ಡಾಲರ್‌ಗೆ ಏರಿದರೆ, ಟ್ವಿಟ್ಟರ್ ಷೇರುಗಳ ಬೆಲೆ ಶೇಕಡ 3.2ರಷ್ಟು ಏರಿಕೆ ಕಂಡು 44.19 ಡಾಲರ್ ಆಗಿದೆ.

ಮಸ್ಕ್ ಅವರು ಕಳೆದ ನವೆಂಬರ್‌ನಿಂದೀಚೆಗೆ 32 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇನ್ನಷ್ಟು ಷೇರುಗಳನ್ನು ಮಾರಾಟ ಮಾಡುವ ಉದ್ದೇಶ ತಮಗೆ ಇಲ್ಲ ಎಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ಹೇಳಿದ್ದರು. ಆ ಬಳಿಕ 44 ಶತಕೋಟಿ ಡಾಲರ್ ಮೌಲ್ಯದ ಟ್ವಿಟ್ಟರ್ ಖರೀದಿ ಒಪ್ಪಂದ ರದ್ದುಗೊಳಿಸುವ ಪ್ರಯತ್ನದಲ್ಲಿದ್ದಾರೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News