ದಿಲ್ಲಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ: ಮಾಸ್ಕ್ ಧಾರಣೆ ಕಡ್ಡಾಯ

Update: 2022-08-11 06:49 GMT
Photo: PTI

ಹೊಸದಿಲ್ಲಿ: ನಗರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದಿಲ್ಲಿ ಸರಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್/ಕವರ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದನ್ನು ಉಲ್ಲಂಘನೆ ಮಾಡುವವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

ANI ಪ್ರಕಾರ, ಅಧಿಸೂಚನೆಯ ಈ ನಿಬಂಧನೆಯ ಅಡಿಯಲ್ಲಿ ದಂಡವು ನಾಲ್ಕು-ಚಕ್ರದ ಖಾಸಗಿ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.

ರಾಷ್ಟ್ರೀಯ ರಾಜಧಾನಿಯಲ್ಲಿ  ಬುಧವಾರ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಹಿಂದಿನ ದಿನಗಿಂತ ಸ್ವಲ್ಪ ಇಳಿಕೆಯಾಗಿದೆ ಎಂದು ವರದಿಯಾಗಿದೆ.  ಆದಾಗ್ಯೂ, ಆರೋಗ್ಯ ಬುಲೆಟಿನ್ ಪ್ರಕಾರ, ಸಾವಿನ ಸಂಖ್ಯೆ ಬುಧವಾರ ಎಂಟಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News