‌ಬಿಹಾರ: ಆ.24 ರಂದು ವಿಶ್ವಾಸಮತ ಯಾಚನೆ ನಡೆಸಲಿರುವ ನಿತೀಶ್‌ ಕುಮಾರ್

Update: 2022-08-11 14:15 GMT

ಪಾಟ್ನಾ,ಆ.11: ಉಪರಾಷ್ಟ್ರಪತಿ ಹುದ್ದೆಗೆ ತನ್ನನ್ನು ಅಭ್ಯರ್ಥಿಯಾಗಿಸುವಂತೆ ಜೆಡಿಯುದ ಕೆಲವರು ಪ್ರಸ್ತಾವಗಳನ್ನು ಕಳುಹಿಸಿದ್ದರು ಎಂಬ ಬಿಜೆಪಿ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲಲ್ ಕುಮಾರ್ ಮೋದಿ ಅವರ ಹೇಳಿಕೆಯನ್ನು ಗುರುವಾರ ಇಲ್ಲಿ ತಿರಸ್ಕರಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು,ಇದೊಳ್ಳೆ ತಮಾಷೆಯಾಗಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ,‘ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ನಾವು ಎನ್ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿದ್ದೆವು. ನಾನು ಉಪರಾಷ್ಟ್ರಪತಿಯಾಗಲು ಬಯಸಿದ್ದೆ ಎನ್ನುವುದು ತಮಾಷೆಯಾಗಿದೆ’ ಎಂದು ಹೇಳಿದರು.

ನಿತೀಶ್ ಅವರನ್ನು ಉಪರಾಷ್ಟ್ರಪತಿಯಾಗಿ ಮಾಡುವಂತೆ ತನ್ನನ್ನು ಕೋರಿದ್ದ ಕೆಲವು ಜೆಡಿಯು ನಾಯಕರು,‌ ನಿತೀಶ್ ದಿಲ್ಲಿಗೆ ಸ್ಥಳಾಂತರಗೊಂಡರೆ ನೀವು ಬಿಹಾರದ ಮುಖ್ಯಮಂತ್ರಿಯಾಗಬಹುದು ಎಂಬ ಯೋಜನೆಯೊಂದಿಗೆ ತನ್ನನ್ನು ಸಂಪರ್ಕಿಸಿದ್ದರು ಎಂದು ಮೋದಿ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಮೋದಿ ಹೇಳಿಕೆಯ ಬೆನ್ನಿಗೇ ಅದನ್ನು ತಿರಸ್ಕರಿಸಿದ್ದ ಜೆಡಿಯು ರಾಷ್ಟ್ರಾಧ್ಯಕ್ಷ ರಾಜೀವ ರಂಜನ ಲಾಲನ್ ಸಿಂಗ್ ಅವರು, ನಿತೀಶ್ ಬಿಜೆಪಿಯೊಂದಿಗೆ ಸಖ್ಯ ಕಡಿದುಕೊಂಡರೆ ಅವರು ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ಆಗ ಮಾಧ್ಯಮ ವರದಿಗಳು ಊಹಾಪೋಹಗಳನ್ನು ಹುಟ್ಟಿಸಿದ್ದವು ಮತ್ತು ಅಂತಹ ಯಾವುದೇ ಸಾಧ್ಯತೆಯನ್ನು ಜೆಡಿಯು ನಿರಾಕರಿಸಿತ್ತು. ಅವರು ಸುಮ್ಮನೆ ಕಥೆಗಳನ್ನು ಸೃಷ್ಟಿಸುತ್ತಿದ್ದಾರಷ್ಟೇ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News