ಒಂದು ದಿನ ಮೊದಲೇ ವಿಶ್ವಕಪ್ ಆರಂಭಕ್ಕೆ ಫಿಫಾ ಸರ್ವಾನುಮತದ ನಿರ್ಧಾರ

Update: 2022-08-12 13:56 GMT
Photo:twitter

ಹೊಸದಿಲ್ಲಿ: ಅಪರೂಪದ ಬದಲಾವಣೆಯಲ್ಲಿ ಈ ವರ್ಷದ ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ನವೆಂಬರ್ 20 ಕ್ಕೆ ಒಂದು ದಿನ ಮೊದಲೇ ನಡೆಸಲು ಫಿಫಾ (FIFA) ಸರ್ವಾನುಮತದಿಂದ ನಿರ್ಧರಿಸಿದೆ. ಇದರೊಂದಿಗೆ ಆತಿಥೇಯ ಖತರ್(hosts Qatar) ನ.20ರಂದು ಈಕ್ವೆಡಾರ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

ಫುಟ್ಬಾಲ್‌ನ ಉನ್ನತ ಅಧಿಕಾರಿಗಳು ಈ ಕುರಿತ ನಿರ್ಧಾರವನ್ನು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು  ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

ವೇಳಾಪಟ್ಟಿ ಬದಲಾವಣೆಯಿಂದ ಸಮಸ್ಯೆಗೀಡಾಗುವ  ಅಭಿಮಾನಿಗಳಿಗೆ ಅನಿರ್ದಿಷ್ಟ ಸಹಾಯವನ್ನು ನೀಡುವುದಾಗಿ ಖತರ್ ಹೇಳಿದೆ.

ಹಳೆಯ ವೇಳಾಪಟ್ಟಿಯ ಪ್ರಕಾರ ನವೆಂಬರ್ 21 ರಂದು ಈಕ್ವೆಡಾರ್ ವಿರುದ್ಧ ಖತರ್ ಅಧಿಕೃತ ಉದ್ಘಾಟನಾ ಪಂದ್ಯ ಆಡಬೇಕಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಭಾರೀ ಹೂಡಿಕೆ ಮಾಡಿದ್ದರಿಂದ ಖತರ್ ಕೂಡ ಇದರಿಂದ ನಿರಾಶೆಗೊಂಡಿತ್ತು.

"ಆತಿಥೇಯ ರಾಷ್ಟ್ರ ಖತರ್ ಈಗ ನವೆಂಬರ್ 20 ರವಿವಾರದಂದು ಅದ್ವಿತೀಯ ಈವೆಂಟ್‌ನ ಭಾಗವಾಗಿ ಈಕ್ವೆಡಾರ್ ಅನ್ನು ಆಡಲಿದೆ" ಎಂದು ಫಿಫಾ ಹೇಳಿದೆ.

"ಇಂದು ಫಿಫಾ ಕೌನ್ಸಿಲ್‌ನ ಬ್ಯೂರೋ ತೆಗೆದುಕೊಂಡ ಸರ್ವಾನುಮತದ ನಿರ್ಧಾರದ ನಂತರ ಈ ವರ್ಷದ ಪಂದ್ಯಾವಳಿಯ ಆರಂಭಿಕ ಪಂದ್ಯ ಹಾಗೂ ಉದ್ಘಾಟನಾ ಸಮಾರಂಭವನ್ನು ಒಂದು ದಿನ ಮೊದಲೇ ನಡೆಸಲು ನಿರ್ಧರಿಸಲಾಗಿದೆ" ಎಂದು ಫಿಫಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News