ನ್ಯೂಯಾರ್ಕ್‌ ನಲ್ಲಿ ಕಾರ್ಯಕ್ರಮದ ನಡುವೆ ಕಾದಂಬರಿಕಾರ ಸಲ್ಮಾನ್‌ ರಶ್ದೀ ಮೇಲೆ ದಾಳಿ

Update: 2022-08-12 17:16 GMT
Photo: Twitter

ನ್ಯೂಯಾರ್ಕ್: 1980 ರ ದಶಕದಲ್ಲಿ ಇರಾನ್‌ನಿಂದ ಹಲವಾರು ಜೀವ ಬೆದರಿಕೆಗಳನ್ನು ಎದುರಿಸಿದ್ದ ಲೇಖಕ, ವಿವಾದಾತ್ಮಕ ಕಾದಂಬರಿಕಾರ ಸಲ್ಮಾನ್ ರಶ್ದಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಶುಕ್ರವಾರ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು indianexpress ವರದಿ ಮಾಡಿದೆ.

ಅಸೋಸಿಯೇಟೆಡ್ ಪ್ರೆಸ್ ವರದಿಗಾರರೊಬ್ಬರು ಹೇಳಿದಂತೆ, ಚೌಟಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ವೇದಿಕೆಯ ಮೇಲೆ ನುಗ್ಗಿದ ವ್ಯಕ್ತಿಯೋರ್ವರು ರಶ್ದಿಯನ್ನು ಪರಿಚಯಿಸುತ್ತಿದ್ದಂತೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ. ಕೂಡಲೇ ಆತನನ್ನು ನೆರೆದವರು ವಶಕ್ಕೆ ಪಡೆದುಕೊಂಡಿದ್ದು, ರಶ್ದಿ ಅವರ ಸ್ಥಿತಿಗತಿಯ ಕುರಿತು ತಕ್ಷಣಕ್ಕೆ ಮಾಹಿತಿ ತಿಳಿದುಬಂದಿಲ್ಲ.

ರಶ್ದಿಯವರ ಪುಸ್ತಕ "ದಿ ಸೈತಾನಿಕ್ ವರ್ಸಸ್" ಅನ್ನು 1988 ರಿಂದ ಇರಾನ್‌ನಲ್ಲಿ ನಿಷೇಧಿಸಲಾಗಿತ್ತು. ಮುಸ್ಲಿಂ ನಂಬಿಕೆಗಳ ಕುರಿತು ವ್ಯಂಗ್ಯ ಹಾಗೂ ನಿಂದನಾತ್ಮಕವಾಗಿ ಆ ಪುಸ್ತಕದಲ್ಲಿ ವಿವರಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News