ಡೊನಾಲ್ಡ್ ಟ್ರಂಪ್ ನಿವಾಸದ ಮೇಲೆ ದಾಳಿ ವೇಳೆ 'ರಹಸ್ಯ ದಾಖಲೆ' ವಶ : ವರದಿ

Update: 2022-08-13 08:28 GMT
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸದ ಮೇಲೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ನಡೆಸಿದ ದಾಳಿಯ ವೇಳೆ ಅಮೆರಿಕದ ಬೇಹುಗಾರಿಕೆ ಕಾಯ್ದೆಯ ಉಲ್ಲಂಘನೆಯ ಸಾಧ್ಯತೆ ಸೇರಿದಂತೆ ಹಲವು "ರಹಸ್ಯ ದಾಖಲೆ"ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶುಕ್ರವಾರ ಬಹಿರಂಗಪಡಿಸಲಾಗಿದೆ.

ಫ್ಲೋರಿಡಾ ನ್ಯಾಯಾಧೀಶರು ನೀಡಿರುವ ವಾರೆಂಟ್ ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಎಫ್‍ಬಿಐ ಅಧಿಕಾರಗಳು ಪ್ರದರ್ಶಿಸಿದ್ದು, ಇದರ ಜತೆಗೆ ಭಾರಿ ಪ್ರಮಾಣದ ವರ್ಗೀಕೃತ ಕಡತಗಳನ್ನು ದಾಳಿಯ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು hindustantimes.com ವರದಿ ಮಾಡಿದೆ.

ರಕ್ಷಣೆಗೆ ಸಂಬಂಧಿಸಿದ ಹಲವು ಸೂಕ್ಷ್ಮ ದಾಖಲೆಗಳನ್ನು ಅಕ್ರಮವಾಗಿ ಹೊಂದುವ ಮೂಲಕ ಅಮೆರಿಕದ ಬೇಹುಗಾರಿಕೆ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ವಾರೆಂಟ್‍ನಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಇದನ್ನು ಓದಿ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆ ಮೇಲೆ ತನಿಖಾ ಸಂಸ್ಥೆ ದಾಳಿ

"ತೀರಾ ರಹಸ್ಯ" ಎಂದು ವರ್ಗೀಕರಿಸಲಾಗಿರುವ ಕೆಲ ದಾಖಲೆಗಳು ವಿಶೇಷ ಸರ್ಕಾರಿ ವ್ಯವಸ್ಥೆಗೆ ಮಾತ್ರ ಸೀಮಿತವಾಗಿರುತ್ತವೆ ಎಂದು ಫೆಡರಲ್ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಏಳು ಪುಟಗಳ ಫೈಲಿಂಗ್‍ನಲ್ಲಿ ವಿವರಿಸಲಾಗಿದೆ. ಫ್ರಾನ್ಸ್ ಅಧ್ಯಕ್ಷರ ಬಗೆಗಿನ ಮಾಹಿತಿ ಸೇರಿದಂತೆ ಮಾರ್-ಎ-ಲಾಗೊದಿಂದ ವಶಪಡಿಸಿಕೊಳ್ಳಲಾದ ವಸ್ತುಗಳ ವಿವರಗಳು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿಯಲ್ಲಿ ಇವೆ ಎಂದು ತಿಳಿದು ಬಂದಿದೆ.

2024ರ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಮುಂದಾಗಿರುವ ಟ್ರಂಪ್ ಅವರ ಆಕ್ಷೇಪವನ್ನು ತಳ್ಳಿಹಾಕಿದ ನ್ಯಾಯಾಂಗ ಇಲಾಖೆ, ಶೋಧನಾ ವಾರೆಂಟ್ ಅನಾವರಣ ಮಾಡುವಂತೆ ಫೆಡರಲ್ ನ್ಯಾಯಾಧೀಶರಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News