ರಾಜಕೀಯದ ನಂತರ ನಾಗರಿಕ ಸೇವೆಗೆ ಹಿಂತಿರುಗಿದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಸಲ್‌ಗೆ ಹೊಸ ಹುದ್ದೆ

Update: 2022-08-13 09:48 GMT
Photo:PTI

ಹೊಸದಿಲ್ಲಿ:  ಐಎಎಸ್ ಅಧಿಕಾರಿ ಶಾ ಫೈಸಲ್(IAS officer Shah Faesal) ಅವರನ್ನು ಕೇಂದ್ರ ಸರಕಾರ ಮರುನೇಮಕ ಮಾಡಿದೆ.  ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯನ್ನಾಗಿ ನೇಮಿಸಿ ಹೊಸ ಹುದ್ದೆ ನೀಡಿದೆ.

ಸಿಬ್ಬಂದಿ ಹಾಗೂ  ತರಬೇತಿ ಇಲಾಖೆ (ಡಿಒಪಿಟಿ) ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶದಲ್ಲಿ ಫೈಸಲ್ ಅವರನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಲ್ಲಿ ನೇಮಿಸಲಾಗಿದೆ ಎಂದು ಹಿರಿಯ ಡಿಒಪಿಟಿ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ತನ್ನ ರಾಜೀನಾಮೆಯನ್ನು ಹಿಂಪಡೆಯುವಂತೆ ಫೈಸಲ್ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ ನಾಲ್ಕು ತಿಂಗಳ ನಂತರ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ ಹಾಗೂ ಎಪ್ರಿಲ್‌ನಲ್ಲಿ ಅವರನ್ನು ಸೇವೆಯಲ್ಲಿ ಮರುಸ್ಥಾಪಿಸಿದೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೇಡರ್‌ನ(Jammu and Kashmir cadre) 2010 ರ ಐಎಎಸ್ ಟಾಪರ್ (2010 batch IAS topper )ಆಗಿರುವ ಫೈಸಲ್ ಅವರು ಜನವರಿ 2019 ರಲ್ಲಿ ಐಎಎಸ್ ಸೇವೆಗೆ ರಾಜೀನಾಮೆ ನೀಡಿದರು ಹಾಗೂ  ರಾಜಕೀಯಕ್ಕೆ ಸೇರಿದರು, ನಂತರ ಅವರು ಆಗಸ್ಟ್ 2020 ರಲ್ಲಿರಾಜಕೀಯವನ್ನು ತ್ಯಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News