ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ

Update: 2022-08-13 09:50 GMT

ಮಂಗಳೂರು, ಆ.13: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕೇಂದ್ರ ಗ್ರಂಥಾಲಯ ಸಮಿತಿಯ ವತಿಯಿಂದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ದಿ.ಡಾ.ಎಸ್.ಆರ್. ರಂಗನಾಥನ್ ಅವರ ಜನ್ಮ ದಿನದ ಸ್ಮರಣಾರ್ಥ ಗ್ರಂಥಾಲಯ ದಿನವನ್ನು ಆಚರಿಸಲಾಯಿತು.

ಫಾದರ್ ಮುಲ್ಲರ್ ಕಾಲೇಜನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಅಂತರ್ ವೈದ್ಯಕೀಯ ಕಾಲೇಜು ಪದವಿ ಪೂರ್ವ ಸಾಮಾನ್ಯ ಜ್ಞಾನ ರಸಪ್ರಶ್ನೆ 'ಮುಲ್ಲರ್ ಲಿಬರ್-2022'ನ್ನು ಆಯೋಜಿಸಲಾಗಿತ್ತು. ದ.ಕ. ಮತ್ತು ಉಡುಪಿ ಜಿಲ್ಲೆಯ ಎಂಟು ವೈದ್ಯಕೀಯ ಕಾಲೇಜುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಎಫ್‌ಎಂಎಂಸಿಯ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಡಾ. ಅನಿಲ್ ಶೆಟ್ಟಿ ರಸಪ್ರಶ್ನೆ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ: ಆಮಿರ್ ಖಾನ್ ರ 'ಲಾಲ್ ಸಿಂಗ್ ಛಡ್ಡಾ' ಚಲನಚಿತ್ರಕ್ಕೆ ಆಸ್ಕರ್ಸ್ ಅಧಿಕೃತ ಪುಟದಿಂದ ವಿಶೇಷ ರೀತಿಯ ಬೆಂಬಲ

ಮಂಗಳೂರಿನ ಯೆನೆಪೊಯ ವೈದ್ಯಕೀಯ ಕಾಲೇಜಿನ ಎಂ.ಡಿ.ಶಾಕಿಬ್ ಅಹ್ಮದ್, ಅಮನ್ ಪ್ರಕಾಶ್, ತುಬಾ ಫಾತಿಮಾ ಪ್ರಥಮ, ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಆಕರ್ಷ್ ಖನ್ನಾ, ಸ್ವಸ್ತಿಕ್ ಗೌತಮ್ ತ್ರಿಪಾಠಿ, ಆದಿಶ್ ಜೋಶಿ ದ್ವಿತೀಯ, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃತಿಕ್ ಎಸ್. ಶೆಟ್ಟಿ, ಶ್ರೀವತ್ಸ ಆಚಾರ್ಯ, ಬಿ. ನಿಶ್ಚಲ್ ಆರ್. ತೃತೀಯ ಬಹುಮಾನ ಪಡೆದರು.

ಮುಖ್ಯ ಅತಿಥಿಯಾಗಿ ಡಾ.ಎಂ.ವಿ. ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷೆ ಡಾ.ಹಿಮಾ ಉರ್ಮಿಳಾ ಶೆಟ್ಟಿ, ಕಾಲೇಜಿನ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೋ, ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ಡೀನ್ ಡಾ. ಆ್ಯಂಟನಿ ಸಿಲ್ವನ್ ಡಿಸೋಜ, ಕೇಂದ್ರ ಗ್ರಂಥಾಲಯ ಸಮಿತಿಯ ಅಧ್ಯಕ್ಷ ಡಾ.ವೆಂಕಟೇಶ್, ಎಫ್‌ಎಂಸಿಐ ಮುಖ್ಯ ಗ್ರಂಥಪಾಲಕಿ ಡಾ.ಜಾನೆಟ್ ಡೊಟ್ಟಿ ಲೋಬೋ, ಉಪ ಪ್ರಾಂಶುಪಾಲೆ ಡಾ.ಡಿವಿನಾ ರೊಡ್ರಿಗಸ್ ಉಪಸ್ಥಿತರಿದ್ದರು.

ಡಾ.ಬಿ.ಎಂ.ವೆಂಕಟೇಶ್ ಸ್ವಾಗತಿಸಿದರು. ಡಾ.ಜಾನ್ ಮಾರ್ಟಿಸ್ ವಂದಿಸಿದರು. ಡಾ. ರೇಷ್ಮಾ ಜಿ. ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News