ಮೊದಲ ತ್ರೈಮಾಸಿಕದಲ್ಲಿ 98,352 ಕೋಟಿ ರೂ. ಪ್ರೀಮಿಯಂ ಆದಾಯ ದಾಖಲಿಸಿದ ಎಲ್‌ಐಸಿ

Update: 2022-08-13 18:41 GMT

ಮುಂಬೈ, ಆ.13:  2022ರ ಜೂನ್ 30ರಂದು ಕೊನೆಗೊಂಡ ಮೊದಲ ತ್ರೈಮಾಸಿಕದ  ಸ್ವತಂತ್ರ (ಸ್ಟ್ಯಾಂಡ್ ಅಲೋನ್) ಹಾಗೂ ಕ್ರೋಢೀಕರಿಸಲಾದ ಆರ್ಥಿಕ ಫಲಿತಾಂಶಗಳಿಗೆ ಭಾರತೀಯ ಜೀವವಿಮಾ ನಿಗಮದ ನಿರ್ದೇಶಕ ಮಂಡಳಿಯು ಶುಕ್ರವಾರ ಅನುಮೋದನೆ ನೀಡಿದೆ. ಈ ಸ್ವತಂತ್ರ ಫಲಿತಾಂಶಗಳ ಪ್ರಮುಖ ವಿವರಗಳು ಹೀಗಿವೆ.

2022ರ ಜೂನ್ 30ರಂದು ಕೊನೆಗೊಂಡ  ತ್ರೈಮಾಸಿಕದಲ್ಲಿ ಎಲ್‌ಐಸಿಯು ತನ್ನ ಒಟ್ಟು ಪ್ರೀಮಿಯಂ ಆದಾಯದಲ್ಲಿ 20.35 ಶೇಕಡ ಹೆಚ್ಚಳವನ್ನು ದಾಖಲಿಸಿದೆ.  ಇದಕ್ಕೆ ಹೋಲಿಸಿದರೆ 2021ರ ಜೂನ್ 30ರಂದು ಕೊನೆಗೊಂಡ ತ್ರೈ ಮಾಸಿಕ ವರ್ಷದಲ್ಲಿ  ಪ್ರೀಮಿಯಂ ವರಮಾನವು 81,721 ಕೋಟಿ ರೂ. ಆಗಿತ್ತು. 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ತೆರಿಗೆಯ ಆನಂತರದ ಲಾಭವು 682.88 ಕೋಟಿ ರೂ. ಆಗಿತ್ತು.

ಮಾರುಕಟ್ಟೆ ಚಟುವಟಿಕೆಯು ಚುರುಕುಗೊಂಡಿರುವಂತೆಯೇ, ಎಲ್‌ಐಸಿಯ ಒಟ್ಟಾರೆ   ವ್ಯವಹಾದ ಗತಿಯು ಪ್ರಬಲತೆಯನ್ನು ಪಡೆದುಕೊಂಡಿದೆ. ಇದರ ಪರಿಣಾಮವಾಗಿ ಒಟ್ಟಾರೆ ಮಾರುಕಟ್ಟೆ ಪಾಲು 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ   ಮೊದಲ ವರ್ಷದ ಪ್ರೀಮಿಯಂ ಆದಾಯದಲ್ಲಿ ಶೇ.65.42 ಶೇಕಡಾ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಆದರ  ಮಾರುಕಟ್ಟೆ ಪಾಲು  63.25 ಶೇಕಡ ಆಗಿದೆ. 

2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದ ಅವಧಿಯಲ್ಲಿ  ವೈಯಕ್ತಿಕ ವಲಯದಲ್ಲಿ (ಇಂಡಿವಿಜುವಲ್ ಸೆಗ್‌ಮೆಂಟ್) ಒಟ್ಟು 36.81 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಲಾಗಿದೆ.,ಕಳೆದ ವರ್ಷ ಇದೇ  ಅವಧಿಯಲ್ಲಿ 23.97 ಲಕ್ಷ ಪಾಲಿಸಿಗಳ  ಮಾರಾಟವಾಗಿದ್ದು, ಈ ಬಾರಿ ಶೇ.59.96 ರಷ್ಟು ಹೆಚ್ಚಳವಾಗಿದೆ.

ಆಡಳಿತವು ಹೊಂದಿರುವ ಸಂಪತ್ತಿನ ಮೌಲ್ಯವು 2022ರ ಜೂನ್ 30ರಂದು 41.02 ಲಕ್ಷ ಕೋಟಿ ರೂ. ಆಗಿದೆ.  2021ರ ಜೂನ್ 30ರಲ್ಲಿ ಈ ಅನುಪಾತವು 38.13 ಲಕ್ಷ ಕೋಟಿ ರೂ.  ಆಗಿದ್ದು, ಈ ಬಾರಿ 7.57 ಶೇಕಡ ಹೆಚ್ಚಳವಾಗಿದೆ.

ಪಾಲಿಸಿದಾರರ ಕಾರ್ಯನಿರ್ವಹಿಸದ ಆಸ್ತಿ (ಎನ್‌ಪಿಎ)ಗಳ ನಿಧಿಯು ಶೇ.9 ಕೋಟಿಗೆ ಇಳಿಕೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಅದು 194 ಕೋಟಿ ಆಗಿತ್ತು. ಋಣಪಾವತಿ ಅನುಪಾತ (solvancy ratio) ವು 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ 188.54  ಆಗಿದ್ದು, 2021ರ ಜೂನ್ 30ರಲ್ಲಿ ಇದು 173.34 ಶೇಕಡ ಆಗಿದೆ.

ಕೋವಿಡ್ ಹಾವಳಿಯ ಆನಂತರ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವಂತೆಯೇ ಸಂಸ್ಥೆಯ ವಿಮಾ ಚಟುವಟಿಕೆಯಲ್ಲೂ ಭಾರೀ ಪ್ರಗತಿ ಕಂಡುಬಂದಿದೆಯೆಂದು ಎಲ್‌ಐಸಿಯ ಅಧ್ಯಕ್ಷ ಎಂ.ಆರ್.ಕುಮಾರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರೊಂದಿಗೆನಿರಂತರ ಸಂರ್ಪವನ್ನು ಇರಿಸಿಕೊಳ್ಲುವ ಮಾದರಿಯನ್ನು ಮರಳಿ ಜಾರಿಗೆ ತರಲಾಗುತ್ತಿದೆ ಎಂದವರು ತಿಳಿಸಿದದಾರೆ. ಖ್ಯಾತ ಪಾರ್ಚೂನ್ ಪತ್ರಿಕೆಯು ಪ್ರಕಟಿಸಿರುವ ವಿಶ್ವದ ಟಾಪ್ 500 ಕಂಪೆನಿಗಳ ಪಟ್ಟಿಯಲ್ಲಿ ಭಾರತೀಯ ಜೀವವಿಮಾ ನಿಗಮವು 98ನೇ ಸ್ಥಾನವನ್ನು ಆಲಂಕರಿಸಿದೆ  ಮತ್ತು  ಭಾರತೀಯ ಕಂಪೆನಿಗಳ ಸಾಲಿನಲ್ಲಿ  ಪ್ರಪ್ರಥಮ ಸ್ಥಾನದಲ್ಲಿದೆ ಎಂದು ಕುಮಾರ್ ಸಂತಸ ವ್ಯಕ್ತಪಡಿಸಿದದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News