ನೀರಿನ ಕೊಡ ಮುಟ್ಟಿದ್ದಕ್ಕೆ ಅಮಾನುಷವಾಗಿ ಥಳಿಸಿದ ಶಿಕ್ಷಕ: ದಲಿತ ಬಾಲಕ ಮೃತ್ಯು

Update: 2022-08-14 18:25 GMT

ಹೊಸದಿಲ್ಲಿ,ಆ.14:  ರಾಜಸ್ಥಾನದ ಶಾಲೆಯೊಂದರಲ್ಲಿ ತನ್ನ  ಹೂಜಿಯಿಂದ ನೀರನ್ನು ತೆಗೆದುಕೊಂಡು ಕುಡಿದಿದ್ದಾನೆಂಬ ಕಾರಣಕ್ಕಾಗಿ  ಮೇಲ್ಜಾತಿಯ ಶಿಕ್ಷಕನಿಂದ ಬರ್ಬರವಾಗಿ ಥಳಿತಕ್ಕೊಳಗಾಗಿದ್ದ ಬಾಲಕನೊಬ್ಬ  ಶನಿವಾರ ಕೊನೆಯುಸಿರೆಳೆದಿದ್ದಾನೆ. ಭಾರತವು  ಸ್ವಾತಂತ್ರ್ಯದ 75ನೇ  ಅಮೃತಮಹೋತ್ಸವದ ಸಂಭ್ರಮದಲ್ಲಿರುವಾಗಲೇ, ಈ ದಲಿತ ಬಾಲಕನ ಸಾವು, ದೇಶದಲ್ಲಿ  ದಲಿತರ  ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಇನ್ನೂ ನಿರಂತರವಾಗಿ ನಡೆಯುತ್ತಿರುವುದನ್ನು ಬೆಟ್ಟು ಮಾಡಿ ತೋರಿಸಿದೆ.

ಜಲೋರ್ ಜಿಲ್ಲೆಯ ಸಾಯ್ಲಾ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಜುಲೈ 20ರಂದು 9ನೇ ತರಗತಿಯ ವಿದ್ಯಾರ್ಥಿ ಇಂದ್ರ ಕುಮಾರ್, ತನ್ನ ಬಿಂದಿಗೆಯಿಂದ ನೀರು ಕುಡಿದುದನ್ನು ಕಂಡು ಕ್ರುದ್ಧನಾದ ಶಿಕ್ಷಕ ಚೈಲ್ ಸಿಂಗ್ ಎಂಬಾತ ತೀವ್ರವಾಗಿ ಥಳಿಸಿದ್ದ. ಭೀರವಾಗಿ ಗಾಯಗೊಂಡಿದ್ದ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ  ಗುಜರಾತ್‌ನ ಅಹ್ಮದಾಬಾದ್‌ಗೆ ಕೊಂಡೊಯ್ಯಲಾಗಿತ್ತು. ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಆತ ಶನಿವಾರ ಕೊನೆಯುಸಿರೆಳೆದಿರುವುದಾಗಿ ಎನ್‌ಡಿಟಿವಿ ಸುದ್ದಿವಾಹಿನಿ ವರದಿ ಮಾಡಿದೆ.

ಶಿಕ್ಷಕನು ತನ್ನ ಪುತ್ರನನ್ನು  ಥಳಿಸುವ ಮೊದಲು ಆತನಿಗೆ ಜಾತಿ ನಿಂದನೆ ಮಾಡಿದ್ದಾನೆಂದು ಮೃತ ಬಾಲಕನ ತಂದೆ ದೇವರಾಮ್ ಮೇಘಾವಾಲ್ ಹೇಳಿದ್ದಾರೆ. ಜಾಲೋರ್‌ನ ಸರಸ್ವತಿ ವಿದ್ಯಾಮಂದಿರದ ಮೂರನೆ ತರಗತಿಯ ವಿದ್ಯಾರ್ಥಿಯಾದ ನನ್ನ ಪುತ್ರ ಇಂದ್ರಕುಮಾರ್‌ನನ್ನು ಶಿಕ್ಷಕ ಚೈಲ್ ಸಿಂಗ್ ಎಂಬಾತನಿಗೆ ಆತನಿಗಾಗಿ ಇರಿಸಲಾಗಿದ್ದ ಮಡಕೆಯಿಂದ ನೀರನ್ನು ತೆಗೆದು ಕುಡಿದಿದ್ದನು.  ನನ್ನ ಪುತ್ರನಿಗೆ ಈ ಮಡಕೆಯು ಮೇಲ್ಜಾತಿಗೆ ಸೇರಿದವನಾದ ಚೈಲ್‌ಸಿಂಗ್‌ಗಾಗಿ ಇರಿಸಲಾಗಿತ್ತೆಂದು ನನ್ನ ಪುತ್ರನಿಗೆ ತಿಳಿದಿರಲಿಲ್ಲ’’ ಎಂದು ಮೇಘವಾಲ್  ಆಂಗ್ಲ ಸುದ್ದಿಪತ್ರಿಕೆಯೊಂದರ ಜತೆ ಹೇಳಿಕೊಂಡಿದ್ದಾರೆ.
 
ಶಿಕ್ಷಕ ಚೈಲ್‌ಸಿಂಗ್‌ನ ಥಳಿತದಿಂದಾಗಿ ಆತನ ಬಲ ಕಿವಿ ಹಾಗೂ ಕಣ್ಣಿಗೆ ಗಾಯಳಾಗಿತ್ತೆಂದು ಮೇಘವಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ‘‘ಥಳಿತದ ಬಳಿಕ ನನ್ನ ಪುತ್ರನ ಕಿವಿಯಲ್ಲಿ ರಕ್ತಸ್ರಾವವಾಗುತಲೇ ಇತ್ತು. ಆತನಿಗೆ ದೇಹದ ಒಂದು ಭಾಗವನ್ನು   ಚಲಿಸಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಮೇಘವಾಲ್ ಹೇಳಿದ್ದಾರೆ. ‘‘ಆತನ ಕಣ್ಣು ಊದಿಕೊಂಡಿತ್ತು ಹಾಗೂ ಮೊದಲಿಗೆ ಜಲೋರ್, ಭಿಮಾಲ್ ಹಾಗೂ ಉದಯಪುರದ ಆಸ್ಪತ್ರೆಗಳಿಗ ದಾಖಲಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಹ್ಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಜಾತಿತಾರತಮ್ಯವೇ  ಆತನ ಸಾವಿಗೆ ಕಾರಣ’’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನಿಗೆ ಹಲ್ಲೆ ನಡೆಸಿದ ಶಿಕ್ಷಕ ಚೈಲ್‌ಸಿಂಗ್‌ನನ್ನು ಬಂಧಿಸಲಾಗಿದ್ದು, ಆನತ ವಿರುದ್ಧ ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಶಿಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದ ಎಂದು ಪೊಲೀಸ್ ಅಧೀಕ್ಷಕ ಹರ್ಷವರ್ಧನ್  ಅಗರ್‌ವಾಲಾ ತಿಳಿಸಿದ್ದಾರೆ. ಬಾಲಕನ ಮೃತದೇಹದ  ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಹಾಗೂ ಪೊಲೀಸರ ತಂಡವೊಂದನ್ನು ಅಹ್ಮದಾಬಾದ್‌ಗೆ ಕಳುಹಿಸಲಾಗುವುದು ಎಂದು ಅಗರ್‌ವಾಲ್  ತಿಳಿಸಿದ್ದಾರೆ.
 ‌
ಬಾಲಕನ ಸಾವಿಗೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ‘‘ಸಂತ್ರಸ್ತ ಕುಟುಂಬಕ್ಕೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಶ್ರಮಿಸುವುದಾಗಿ ಗೆಹ್ಲೋಟ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News