ಹಿರಿಯ ಹೂಡಿಕೆದಾರ ರಾಕೇಶ್ ಜುನ್ ಜುನ್ ವಾಲಾ ಮುಂಬೈ ಆಸ್ಪತ್ರೆಯಲ್ಲಿ ನಿಧನ

Update: 2022-08-14 04:34 GMT
Photo:PTI

ಹೊಸದಿಲ್ಲಿ: ಹಿರಿಯ ಹೂಡಿಕೆದಾರ ರಾಕೇಶ್ ಜುನ್ ಜುನ್ ವಾಲಾ (Veteran investor Rakesh Jhunjhunwala)ಇಂದು ಬೆಳಗ್ಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಹೂಡಿಕೆದಾರ ರಾಕೇಶ್ ಜುನ್ ಜುನ್ ವಾಲಾ ಅವರನ್ನು ಬೆಳಿಗ್ಗೆ 6.45 ರ ಸುಮಾರಿಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸಾಗಿಸಲಾಯಿತು.  ಅಲ್ಲಿ ಅವರು ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ದಲಾಲ್ ಸ್ಟ್ರೀಟ್‌ನ ಬಿಗ್ ಬುಲ್ (big bull of Dalal Street)ಎಂದೇ ಕರೆಯಲ್ಪಡುವ ಅನುಭವಿ ಹೂಡಿಕೆದಾರ ರಾಕೇಶ್ ಅವರು ಫೋರ್ಬ್ಸ್ ಪ್ರಕಾರ ಸುಮಾರು 5.5 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ವರದಿಯಾಗಿದೆ.

ಜುನ್ ಜುನ್‌ವಾಲಾ ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಹಾಗೂ  ಕಳೆದ ವಾರ ಆಕಾಶ ಏರ್‌ನ  ಪ್ರಾರಂಭೋತ್ಸವದಲ್ಲಿ ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡಿದ್ದರು.

ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಜುನ್ ಜುನ್ ವಾಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, "ಅವರು ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಭಾರತದ ಪ್ರಗತಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ನಿಧನವು ದುಃಖಕರವಾಗಿದೆ. ಅವರ ಕುಟುಂಬ ಹಾಗೂ  ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ" ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News