×
Ad

ಜನರನ್ನು ಗುಲಾಮರಾಗಿಸುವ ಗೋದಿ ಮೀಡಿಯಾ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯಲಿ: ರವೀಶ್ ಕುಮಾರ್

Update: 2022-08-14 10:48 IST

ಗೋದಿ ಮೀಡಿಯಾ ಇತಿಹಾಸದ ಪುಟಗಳಿಂದ ನೆಹರೂ ಅವರನ್ನು ತೆಗೆದು ಹಾಕಲು ಬಯಸುತ್ತಿದೆ. ನೆಹರೂ ಅವರನ್ನು ಅಳಿಸಿ ಹಾಕಿ ಸ್ವಾತಂತ್ರ್ಯದ ವಾರ್ಷಿಕೋತ್ಸವ ಆಚರಿಸಲು ಅವರು ಹೊರಟಿದ್ದರೆ ಅವರು ಆಚರಿಸುತ್ತಿರುವುದು ಸ್ವಾತಂತ್ರ್ಯ ಅಲ್ಲ. ಆ ಆಂಕರ್ ಹಾಗೆ ಯಾಕೆ ಆಗಲು ಬಿಟ್ಟರು ಎಂದು ನನಗೆ ಗೊತ್ತಿಲ್ಲ. ಯಾವುದಾದರೂ ಸರಕಾರ ಹತ್ತು ವರ್ಷ ನಡೆದರೆ ಇತಿಹಾಸ ಅದರ ಗುಲಾಮಗಿರಿಗೆ ಇಳಿಯುತ್ತೆ ಎಂದಷ್ಟೇ ಆ ಆಂಕರ್ ಗೆ ಇತಿಹಾಸದ ಬಗ್ಗೆ ಗೊತ್ತಿದೆ. ಆ ಆಂಕರ್ ಗೆ ಆತನ ಆತ್ಮಸಾಕ್ಷಿ ಏನು ಹೇಳುತ್ತಿರಬಹುದು. ಟಿಆರ್‌ಪೀ  ದೊಂಬರತಕ್ಕೂ ಸಿಗುತ್ತದೆ. ಆದರೆ ದೊಂಬರಾಟದ ಗುಂಪು ಕಟ್ಟಿಕೊಂಡು ನೆಹರೂ ಅವರನ್ನು ಅಳಿಸಿ ಹಾಕಲು ಬಯಸುವವರು ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ರಸ್ತೆಯ ಹೆಸರು ಬದಲಾಯಿಸಿದರೆ ಅದರ ಹೆಸರು ಮಾತ್ರ ಬದಲಾಗುತ್ತದೆ, ಅದರ ಇತಿಹಾಸ ಬದಲಾಗುವುದಿಲ್ಲ.

ಗೋದಿ ಮೀಡಿಯಾ ಸ್ವಾತಂತ್ಯ ಸೇನಾನಿಗಳಿಗೆ ಅವಮಾನ ಮಾಡುತ್ತಿದೆ. ಅವರ ಸಂಘರ್ಷದ ಬೆವರಿಗೆ ತಮ್ಮ ಮಾಲೀಕರು ತಿಂದ ಉಪ್ಪನ್ನು ಸವರುತ್ತಿದೆ. ಆ ಮಾಲೀಕರು ಹೇಳಿದ ನೂರು ಸುಳ್ಳುಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಲೇ ಇರುತ್ತವೆ. ನೀವು ನೆಹರೂ ಮೇಲೆ ಸೇಡು ತೀರಿಸಿ ಆಝಾದಿಯ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ ನೆಹರೂ ಅವರನ್ನೇ ತಮ್ಮ ನಾಯಕನೆಂದು ಸ್ವೀಕರಿಸಿದ ಆ ಇಡೀ ಹೋರಾಟವನ್ನೇ ನೀವು ಅವಮಾನಿಸುತ್ತಿದ್ದೀರಿ. ಸರ್ದಾರ್ ಪಟೇಲರೂ ಅವರನ್ನೇ ತನ್ನ ನಾಯಕನೆಂದು ಒಪ್ಪಿದ್ದರು.

ಇವತ್ತು ಗೋದಿ ಮೀಡಿಯಾ ಮಾಡಿದ್ದನ್ನು ನೋಡಿದ ಮೇಲೆ ನನಗೆ ನನ್ನ ಖಚಿತ ನಂಬಿಕೆಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಈ ದೇಶದ ಜನರು ಈ ಗೋದಿ ಮೀಡಿಯಾದ ಜಾಲದಿಂದ ಹೊರಬಂದು ಅದರಿಂದ ಮುಕ್ತಿ ಪಡೆಯದಿದ್ದರೆ ಜನರ ಜೀವನ ಸ್ವತಂತ್ರ ದೇಶದಲ್ಲೂ ಗುಲಾಮಿ ಜೀವನವೇ ಆಗುತ್ತದೆ. ಈಗ ಈ ದೇಶವನ್ನು ಉಳಿಸುವ ಮೊದಲ ಹೋರಾಟ ಗೋದಿ ಮೀಡಿಯಾದಿಂದ ಮುಕ್ತಿಗಾಗಿ ನಡೆಯಬೇಕಿದೆ. ಒಂದು ದಿನ ಈ ದೇಶದ ಜನರು ತಮ್ಮ ಮನೆಗಳಿಂದ ಈ ಗೋದಿ ಮೀಡಿಯಾವನ್ನು ಹೊರ ಹಾಕಲೇಬೇಕು.

ಆ ದಿನ ಬರುವವರೆಗೂ ನೀವು ಗುಲಾಮ ವೀಕ್ಷಕರಾಗಿ ಈ ಗೋದಿ ಮೀಡಿಯಾ ಗಳ ಎದುರು ತಲೆ ತಗ್ಗಿಸಿ ನಿಂತಿರುತ್ತೀರಿ. ಈ ದೇಶದಲ್ಲಿ ಪತ್ರಿಕೋದ್ಯಮ ಸ್ವಾತಂತ್ರ್ಯ ಹೋರಾಟದ ಜ್ಯೋತಿಯಾಗಿತ್ತು. ಆದರೆ ಇವತ್ತು ಗೋದಿ ಮೀಡಿಯಾ ನಿಮ್ಮನ್ನೇ ಗುಲಾಮರಾಗಿಸುತ್ತಿದೆ. ಇದಕ್ಕಿಂತ ನಾಚಿಕೆಗೇಡು ಬೇರೇನಿದೆ? ಅಮೃತ ಮಹೋತ್ಸವದ ಹೆಸರಲ್ಲಿ ವಿಷ ಹೊರ ಹಾಕಲಾಗುತ್ತಿದೆ. ನೆಹರೂ ವಿರುದ್ಧ ದ್ವೇಷಕ್ಕೆ ದಾರಿ ಹುಡುಕಲಾಗುತ್ತಿದೆ. ಬಹಳ ವಿಷಾದದ ಸಂಗತಿ ಇದು. ಇಷ್ಟೆಲ್ಲ ಆದ ಮೇಲೂ ಕೋಟಿಗಟ್ಟಲೆ ಜನರು ಅದೇ ನೆಹರೂ ಅವರು ಹಾರಿಸಿದ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಾರೆ, ಮನೆ, ವಾಹನ ಹಾಗೂ ಕಟ್ಟಡಗಳ ಮೇಲೆ ಹಾರಿಸುತ್ತಿದ್ದಾರೆ.

ಗೋದಿ ಮೀಡಿಯಾಗೆ ಧಿಕ್ಕಾರ. ಮಹಾತ್ಮ ಗಾಂಧಿ ಝಿಂದಾಬಾದ್. ಗೋದಿ ಮೀಡಿಯಾಗೆ ಧಿಕ್ಕಾರ. ಜವಾಹರ್ ಲಾಲ್ ಝಿಂದಾಬಾದ್. ಗೋದಿ ಮೀಡಿಯಾಗೆ ಧಿಕ್ಕಾರ. ಸರ್ದಾರ್‌ ಪಟೇಲ್‌ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಡಾ. ಅಂಬೇಡ್ಕರ್‌ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಭಗತ್‌ ಸಿಂಗ್‌ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಚಂದ್ರಶೇಖರ್‌ ಅಝಾದ್‌ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಉದ್ಧಮ್‌ ಸಿಂಗ್‌ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಕಸ್ತೂರ್ಬಾ ಗಾಂಧಿ ಝಿಂದಾಬಾದ್.‌ ಗೋದಿ ಮೀಡಿಯಾಗೆ ಧಿಕ್ಕಾರ. ಆಚಾರ್ಯ ಕೃಪಲಾನಿ ಝಿಂದಾಬಾದ್‌. ಗೋದಿ ಮೀಡಿಯಾಗೆ ಧಿಕ್ಕಾರ. ಸ್ವಾತಂತ್ರ್ಯದ ಪ್ರತಿಯೊಬ್ಬ ಯೋಧರಿಗೂ ಝಿಂದಾಬಾದ್.‌ 

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ಗೋದಿ ಮೀಡಿಯಾಗೆ ಧಿಕ್ಕಾರ. ಗೋದಿ ಮೀಡಿಯಾಗೆ ಧಿಕ್ಕಾರ.

ನಿಮ್ಮ ಮನಸ್ಸಲ್ಲಿ ಈ ಘೋಷಣೆಯನ್ನು ಮತ್ತೆ ಮತ್ತೆ ಪುನರಾವರ್ತಿಸಿ.
ನಿಮ್ಮೊಳಗೆ ಒಂದು ನೈತಿಕ ಶಕ್ತಿ ಬರುತ್ತದೆ. ದೇಶಕ್ಕಾಗಿ ಏನಾದರೂ ಮಾಡುವ ಉತ್ಸಾಹ ಬರುತ್ತದೆ. ಮುಕ್ತಿ ಸಿಗುತ್ತದೆ.

ಜೈ ಹಿಂದ್ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News