ಈ ಹಿಂದೆಯೇ ಬಂಡಾಯ ಏಳದ್ದಕ್ಕೆ ವಿಷಾದವಿದೆ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

Update: 2022-08-14 10:14 GMT
Photo: PTI

ಥಾಣೆ: ಶಿವಸೇನ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ (Shiv Sena supremo Balasaheb Thackeray)ಅವರ ಬೋಧನೆಗಳಿಗೆ ವ್ಯತಿರಿಕ್ತವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರ ರಚನೆಯಾದಾಗಲೇ  ಬಂಡಾಯ  ಏಳದೇ  ಇರುವುದಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief minister Eknath Shinde)ವಿಷಾದ ವ್ಯಕ್ತಪಡಿಸಿದರು.

ಥಾಣೆಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸುಮಾರು 175 ವಿವಿಧ ನಗರ ಮೂಲದ ಸಂಸ್ಥೆಗಳ ಜಂಟಿ ಅಭಿನಂದನಾ ಸಮಾರಂಭದಲ್ಲಿ ಶಿಂಧೆ ಮಾತನಾಡಿದರು.

“ನಾನು  ಅಂಗಡಿಯನ್ನು (ಶಿವಸೇನೆ) ಮುಚ್ಚುತ್ತೇನೆಯೇ ಹೊರತು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸುವುದಿಲ್ಲ ಎಂದು ಬಾಳಾಸಾಹೇಬರು ಹೇಳಿದ್ದರು. ಅದನ್ನೇ ನಾವು ಮಾಡಿದ್ದೇವೆ. ಎಂವಿಎ ಸರಕಾರ ರಚನೆಯಾದಾಗ 2.5 ವರ್ಷಗಳ ಹಿಂದೆಯೇ  ನಾವು ಬಂಡಾಯವ ಸಾರಬೇಕಿತ್ತು  ಎಂದು ಕೆಲವೊಮ್ಮೆ ಅನಿಸುತ್ತದೆ. ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಹಾಗೂ  ಎನ್‌ಸಿಪಿ ನಾಯಕರು ನಮ್ಮ ಭದ್ರಕೋಟೆಗಳಲ್ಲಿ ಶಕ್ತಿ ಪ್ರದರ್ಶನ ನಡೆಸಿ ಮುಂದಿನ ಸಿಎಂ ತಮ್ಮ ಪಕ್ಷದಿಂದಲೇ ಎಂದು ಹೇಳಿಕೊಂಡ ಉದಾಹರಣೆಗಳಿವೆ. ನಮಗೆ ಅದನ್ನು ಸಹಿಸಲಾಗಲಿಲ್ಲ ಹಾಗೂ  ನಾನು ವೈಯಕ್ತಿಕವಾಗಿ ಉದ್ಧವ್ ಠಾಕ್ರೆ ಅವರೊಂದಿಗೆ ತರ್ಕಿಸಲು ಪ್ರಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News