ಸುಪ್ರೀಂಕೋರ್ಟ್‌ ಅನ್ನು ಅಪಹಾಸ್ಯ ಮಾಡಿದ್ದಾರೆಂದು ಪ್ರಶಾಂತ್‌ ಭೂಷಣ್‌ ವಿರುದ್ಧ ಬಾರ್‌ ಕೌನ್ಸಿಲ್‌ ಆಕ್ರೋಶ

Update: 2022-08-14 09:14 GMT

ಹೊಸದಿಲ್ಲಿ: ಝಕಿಯಾ ಜಾಫ್ರಿ, ಆದಿವಾಸಿ ಕಾರ್ಯಕರ್ತ ಹಿಮಾಂಶು ಕುಮಾರ್ (Himanshu Kumar) ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್(Supreme court) ತೀರ್ಪುಗಳನ್ನು ʼಅಪಹಾಸ್ಯʼ ಮಾಡಿದ್ದಾರೆಂದು ಭಾರತೀಯ ಬಾರ್ ಕೌನ್ಸಿಲ್ ಆಫ್ ಇಂಡಿಯಾವು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಖಂಡಿಸಿದೆ ಎಂದು ಪಿಟಿಐ ಶನಿವಾರ ವರದಿ ಮಾಡಿದೆ.

ಭೂಷಣ್ ಅವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು "ಭಾರತ ವಿರೋಧಿ ಧೋರಣೆ" ಯಲ್ಲಿ ತೊಡಗಿದ್ದಾರೆ ಎಂದು ವಕೀಲರ ಸಂಘವು ಹೇಳಿದೆ.

ಝಕಿಯಾ ಜಾಫ್ರಿ (Zakia Jafri) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಗಳ ತೀರ್ಪುಗಳು ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುತ್ತವೆ ಅಥವಾ ಕೇಂದ್ರದ ಪರವಾಗಿವೆ ಎಂದು ಪ್ರತಿಪಕ್ಷಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಖಂಡಿಸಿದ್ದಾರೆ. ಜೂನ್ 24 ರಂದು ಸುಪ್ರೀಂ ಕೋರ್ಟ್(Supreme Court) ಝಕಿಯಾ ಜಾಫ್ರಿ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಜುಲೈ 27 ರಂದು, ನ್ಯಾಯಮೂರ್ತಿ ಎಎಮ್ ಖಾನ್ವಿಲ್ಕರ್ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸಮನ್ಸ್, ಬಂಧನ ಮತ್ತು ದಾಳಿಗಳ ಕಡಿವಾಣವಿಲ್ಲದ ಅಧಿಕಾರವನ್ನು ನೀಡುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಮಾಡಲಾದ ಪ್ರಮುಖ ತಿದ್ದುಪಡಿಗಳನ್ನು ಎತ್ತಿಹಿಡಿದಿತ್ತು.

ಆಗಸ್ಟ್ 10 ರಂದು ಭೂಷಣ್ (Prashant Bhushan) ಅವರು ಈ ತೀರ್ಪುಗಳು ತುಂಬಾ ನೋವಿನಿಂದ ಕೂಡಿದೆ ಎಂದು ಹೇಳಿದರು. "ಇದು ಸುಪ್ರೀಂ ಕೋರ್ಟ್‌ನ ಕರ್ತವ್ಯವವನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತದೆ, ಅಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಈಗ ಸುಪ್ರೀಂ ಕೋರ್ಟ್‌ಗೆ ಬಂದಿದ್ದಕ್ಕಾಗಿ ದಂಡ ವಿಧಿಸಲಾಗುತ್ತಿದೆ." ಎಂದು ಹೇಳಿದ್ದರು.

2009ರಲ್ಲಿ ಛತ್ತೀಸ್‌ಗಢದಲ್ಲಿ ನಡೆದ 17 ಆದಿವಾಸಿಗಳ ಹತ್ಯೆಯ ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಕ್ಕಾಗಿ 5 ಲಕ್ಷ ರೂ. ಪಾವತಿಸುವಂತೆ ಕೇಳಲಾದ ಕಾರ್ಯಕರ್ತ ಕುಮಾರ್ ಕುರಿತ ಪ್ರಕರಣವನ್ನು ಭೂಷಣ್ ಉಲ್ಲೇಖಿಸಿದರು. ಕುಮಾರ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News