1995-96 ರ ಮೊದಲು ಬಿಜೆಪಿಯನ್ನು "ಅಸ್ಪೃಶ್ಯ" ಪಕ್ಷವೆಂದು ಪರಿಗಣಿಸಲಾಗಿತ್ತು: ಉಪೇಂದ್ರ ಕುಶ್ವಾಹಾ

Update: 2022-08-14 09:38 GMT
Photo:PTI

ಹೊಸದಿಲ್ಲಿ : ಸಂಯುಕ್ತ ಜನತಾ ದಳ (ಜೆಡಿಯು) (Janata Dal (United) ರಾಷ್ಟ್ರೀಯ ಜನತಾ ದಳ(RJD)ದೊಂದಿಗೆ ವಿಲೀನವಾಗಲಿದೆ ಎಂಬ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರ ಗೇಲಿಯಿಂದ ಅಸಮಾಧಾನಗೊಂಡಿರುವ ಜೆಡಿಯು ನಾಯಕ ಉಪೇಂದ್ರ ಸಿಂಗ್ ಕುಶ್ವಾಹಾ (Upendra Singh Kushwaha )ಈ ಹೇಳಿಕೆ ಕೇವಲ ಆಕ್ಷೇಪಾರ್ಹ ಮಾತ್ರವಲ್ಲ, ಅವಮಾನಕರವಾಗಿದೆ. ಬಿಜೆಪಿ ನಾಯಕರು 1995-96ರ ಇತಿಹಾಸ ನೆನಪಿಸಿಕೊಳ್ಳಬೇಕು    ಎಂದು ಹೇಳಿದ್ದಾರೆ.

ಬಿಹಾರದಲ್ಲಿ ನಿತೀಶ್ ಕುಮಾರ್(Nitish Kumar ) ತಮ್ಮ ಮೈತ್ರಿಯಿಂದ ಹಿಂದೆ ಸರಿದಿದ್ದಕ್ಕಾಗಿ ಅಸಮಾಧಾನಗೊಂಡಿರುವ ಬಿಜೆಪಿಯ ಹಿರಿಯ ನಾಯಕರಾದ ಸುಶೀಲ್ ಮೋದಿ ಹಾಗೂ  ರವಿಶಂಕರ್ ಪ್ರಸಾದ್ ಅವರು ಇತ್ತೀಚೆಗೆ ಕುಮಾರ್ ಅವರನ್ನು ಬಿಜೆಪಿ ಹಲವಾರು ಬಾರಿ ಕೇಂದ್ರ ಸಚಿವರನ್ನಾಗಿ ಮಾಡಿದ್ದಕ್ಕಾಗಿ ಹಾಗೂ  ರಾಜ್ಯ ವಿಧಾನಸಭೆಯಲ್ಲಿ ಕಡಿಮೆ ಬಲ ಹೊಂದಿದ್ದರೂ  ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕಾಗಿ ಕೃತಜ್ಞರಾಗಿರಬೇಕು ಎಂದು ಹೇಳಿದ್ದಾರೆ.

ಇತಿಹಾಸದ ಪುಟವನ್ನು ಬಿಚ್ಚಿಟ್ಟ  ಕುಶ್ವಾಹಾ ಅವರು ‘’1995-96 ರ ಮೊದಲು ಬಿಜೆಪಿಯನ್ನು "ಅಸ್ಪೃಶ್ಯ" ಪಕ್ಷವೆಂದು ಪರಿಗಣಿಸಲಾಗಿತ್ತು. ಏಕೆಂದರೆ ಯಾವುದೇ ರಾಜಕೀಯ ಪಕ್ಷವು ಅವರೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಯಸಿರಲಿಲ್ಲ.  ನಂತರ ಸಮತಾ ಪಕ್ಷದ ನಾಯಕರಾದ ಜಾರ್ಜ್ ಫೆರ್ನಾಂಡಿಸ್ ಹಾಗೂ  ನಿತೀಶ್ ಕುಮಾರ್ ಅವರು "ದೇವತೆಗಳಂತೆ" ಬಿಜೆಪಿಯ ರಕ್ಷಣೆಗೆ ಬಂದರು’’ ಎಂದು ಹೇಳಿದರು.

ಅವರು ಬಿಜೆಪಿಯ ಮುಂಬೈ ಅಧಿವೇಶನದಲ್ಲಿ ಭಾಗವಹಿಸಿದರು . ನಂತರ ಸಮತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಬಿಜೆಪಿಯು ಆಗ ಅಸ್ಪೃಶ್ಯದಿಂದ ಸ್ಪರ್ಶನೀಯವಾಯಿತು. ಜಾರ್ಜ್-ನಿತೀಶ್ ಉಪಕಾರ ಮಾಡದೇ ಇದ್ದಿದ್ದರೆ ಇಂದು ನಿಮ್ಮ ಗುರುತು ಸಿಗುತ್ತಿರಲಿಲ್ಲ ಎಂದು ಹಿಂದಿಯಲ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಕೃತಘ್ನತೆಯ  ಮಿತಿಗಳನ್ನು ದಾಟಲಾಗಿದೆ ಹಾಗೂ "ಬಿಜೆಪಿ ನಾಯಕರರಲ್ಲಿ ಏನಾದರೂ ಕೃತಜ್ಞತೆ ಉಳಿದಿದ್ದರೆ 1995-96 ರ ಈ ಇತಿಹಾಸವನ್ನು  ನೆನಪಿಸಿಕೊಳ್ಳಬೇಕು ಎಂದು ಕುಶ್ವಾಹಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News