ಮಹಾರಾಷ್ಟ್ರ: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಗೃಹ ಮತ್ತು ಹಣಕಾಸು ಸಚಿವಾಲಯ

Update: 2022-08-14 15:03 GMT

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರವಿವಾರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಗೃಹ ಮತ್ತು ಹಣಕಾಸು ಸಚಿವಾಲಯಗಳನ್ನು ನೀಡಿದ್ದಾರೆ, ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ (ಸಾರ್ವಜನಿಕ ಯೋಜನೆಗಳು) ಖಾತೆಗಳನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ ಎಂದು Indiatoday.in ವರದಿ ಮಾಡಿದೆ.

ಐದು ದಿನಗಳ ಹಿಂದೆಯಷ್ಟೇ ಶಿಂಧೆ ಸಂಪುಟಕ್ಕೆ 18 ಸಚಿವರು ಸೇರ್ಪಡೆಗೊಂಡಿದ್ದರು.

ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಶಿಂಧೆ, ಜೂನ್ 30ರಂದು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಫಡ್ನವೀಸ್ ಅವರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಗೃಹ ಮತ್ತು ಹಣಕಾಸು ಜೊತೆಗೆ, ಫಡ್ನವಿಸ್ ಕಾನೂನು ಮತ್ತು ನ್ಯಾಯಾಂಗ, ಜಲ ಸಂಪನ್ಮೂಲಗಳು, ವಸತಿ, ಇಂಧನ ಮತ್ತು ಪ್ರೋಟೋಕಾಲ್ ಪೋರ್ಟ್ಫೋಲಿಯೊಗಳನ್ನು ಸಹ ನಿರ್ವಹಿಸುತ್ತಿದ್ದಾರೆ

ಈ ನಡುವೆ, ಸಂಪುಟದಲ್ಲಿ ಮತ್ತೊಂದು ವಿಸ್ತರಣೆಯಾಗುವವರೆಗೆ, ಸಿಎಂ ಶಿಂಧೆ ಅವರು ಸಾಮಾನ್ಯ ಆಡಳಿತ, ಮಾಹಿತಿ ಮತ್ತು ತಂತ್ರಜ್ಞಾನ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳು, ಲೋಕೋಪಯೋಗಿ (ಸಾರ್ವಜನಿಕ ಯೋಜನೆಗಳು), ಸಾರಿಗೆ, ಮಾರುಕಟ್ಟೆ, ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು, ಪರಿಹಾರ ಮತ್ತು ಪುನರ್ವಸತಿ, ವಿಪತ್ತು ನಿರ್ವಹಣೆ, ಮಣ್ಣು ಮತ್ತು ಜಲ ಸಂರಕ್ಷಣೆ , ಪರಿಸರ ಮತ್ತು ಹವಾಮಾನ ಬದಲಾವಣೆ, ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆಗಳನ್ನು ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News