ದ.ಕ.ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಸಾರಲು 'ಭಾರತೀಯ ಮುಸ್ಲಿಂ' ಸ್ವಯಂಸೇವಕರಿಂದ ‘ಬಾಕ್ಸ್‌ ಆಫ್‌ ಹ್ಯಾಪಿನೆಸ್’ ಅಭಿಯಾನ

Update: 2022-08-14 15:55 GMT

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದ.ಕ. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಮರು ಸ್ಥಾಪಿಸಲು 'ಭಾರತೀಯ ಮುಸ್ಲಿಂ' ಸ್ವಯಂ ಸೇವಕರಿಂದ ‘ಬಾಕ್ಸ್‌ ಆಫ್‌ ಹ್ಯಾಪಿನೆಸ್’ ಅಭಿಯಾನದ ಅಂಗವಾಗಿ ಸಿಹಿ ಪೊಟ್ಟಣಗಳನ್ನು ವಿತರಿಸಲು ನಿರ್ಧರಿಸಲಾಗಿದೆ.

“ಕಳೆದ ತಿಂಗಳು ನಡೆದ ಮೂರು ಕೊಲೆಗಳ ನಂತರ ದ.ಕ. ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ನಗರದ 10 ಪ್ರದೇಶಗಳಲ್ಲಿ ಕೋಮು ಸೌಹಾರ್ದತೆಗಾಗಿ ಸಿಹಿ ಹಂಚುವ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಆ.15ರಂದು ಆಟೊ ನಿಲ್ದಾಣಗಳು, ಪೊಲೀಸ್ ಠಾಣೆಗಳು, ಅಂಗಡಿಗಳು, ದೇವಸ್ಥಾನಗಳು ಮತ್ತು ಚರ್ಚ್‌ಗಳಲ್ಲಿ ಸಿಹಿ ಹಂಚಲಿದ್ದೇವೆ” ಎಂದು ಅಭಿಯಾನದ ಸದಸ್ಯರಾದ ಸೈಫ್ ಸುಲ್ತಾನ್ ತಿಳಿಸಿದ್ದಾರೆ.

“ಈ ಅಭಿಯಾನದ ಮೂಲಕ ಏಕತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತೇವೆ. ಮುಸ್ಲಿಮರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಅವರು ಈ ದೇಶದ ಅಭಿವೃದ್ಧಿಯ ಭಾಗವಾಗಿದ್ದಾರೆಂದು ಮನದಟ್ಟು ಮಾಡುತ್ತೇವೆ” ಎಂದು ಸೈಫ್ ಹೇಳಿದ್ದಾರೆ.

ಪ್ರತಿ ಪೊಟ್ಟಣದಲ್ಲಿ ಜ್ಯೂಸ್, ಚಾಕೊಲೇಟ್, ಕೇಕ್ ಮತ್ತು ಇತರ ತಿಂಡಿಗಳ ಪ್ಯಾಕೆಟ್‌ಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News