2022ಕ್ಕೆ ಪ್ರತಿಯೊಬ್ಬ ಭಾರತೀಯನಿಗೆ ಮನೆ, ರೈತರ ಆದಾಯದಲ್ಲಿ ದ್ವಿಗುಣ: ಪ್ರಧಾನಿ ನೀಡಿದ್ದ ಭರವಸೆ ಬಗ್ಗೆ ಚರ್ಚೆ

Update: 2022-08-15 07:17 GMT
Photo:PTI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ( Prime Minister Narendra Modi) ಅವರು ಇಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ದೃಷ್ಟಿಕೋನವನ್ನು ತಿಳಿಸಿದರು. ಈ ವೇಳೆ   2022 ರಲ್ಲಿ ಭಾರತದ ಪ್ರತಿಯೊಬ್ಬರಿಗೂ ವಸತಿ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ(House For Every Indian, Double Farmers' Income)  ಪ್ರಧಾನಿಯ ಹಿಂದಿನ ಭರವಸೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಬಂದಿದೆ.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಸತಿ, ರೈತರ ಆದಾಯ ದ್ವಿಗುಣ ಹಾಗೂ ಇತರ ವಿಷಯಗಳ ಕುರಿತು ಮೋದಿ ಅವರು  2022 ರಲ್ಲಿ  ಭಾರತಕ್ಕೆ ನಿಗದಿಪಡಿಸಿದ ಗುರಿಗಳ ಕುರಿತು ಈಗ ಚರ್ಚೆ ನಡೆಯತ್ತಿದೆ. 2022 ಕ್ಕೆ ನೀಡಿದ ಯಾವುದೇ ಭರವಸೆಗಳನ್ನು ಲೆಕ್ಕಿಸದೆ ಗೋಲ್‌ಪೋಸ್ಟ್ ಅನ್ನು 2047 ಕ್ಕೆ ಬದಲಾಯಿಸಲಾಗಿದೆ ಎಂದು ಕೆಲವು ವ್ಯಂಗ್ಯವಾಡಿದ್ದಾರೆ.

ಜೂನ್ 2018 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G) ಫಲಾನುಭವಿಗಳೊಂದಿಗೆ ಸಂವಾದ ನಡೆಸುವಾಗ  2022 ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಮನೆಯನ್ನು ಖಚಿತಪಡಿಸಿಕೊಳ್ಳಲು ಸರಕಾರವು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದರು.

"ಆವಾಸ್ ಯೋಜನೆಯು ಕೇವಲ ಇಟ್ಟಿಗೆ ಮತ್ತು ಗಾರೆಗಳ ಬಗ್ಗೆ ಅಲ್ಲ. ಈ ಯೋಜನೆಯು ಉತ್ತಮ ಗುಣಮಟ್ಟದ ಜೀವನ ಹಾಗೂ  ಕನಸುಗಳು ನನಸಾಗುವುದಾಗಿದೆ. 2022 ರ ವೇಳೆಗೆ ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸುವ ವೇಳೆಗೆ ನಾವು  ಪ್ರತಿಯೊಬ್ಬ ಭಾರತೀಯರಿಗೂ ಮನೆ ಇರಬೇಕು ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು NaMo ಆಪ್ ಮೂಲಕ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡುವಾಗ  ಪ್ರಧಾನಿ ಹೇಳಿದ್ದರು.

ಅದೇ ವರ್ಷದ ಮತ್ತೊಂದು ಭರವಸೆಯಲ್ಲಿ, ಪ್ರಧಾನಿ ರೈತರೊಂದಿಗೆ ಸಂವಾದ ನಡೆಸುವಾಗ 2022 ರ ವೇಳೆಗೆ ಅವರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News