ಈ ಸುಳ್ಳು ಭರವಸೆಗಳ ಸಂಸ್ಕೃತಿ ಹೇಗೆ ,ಯಾವಾಗ ಕೊನೆಗೊಳ್ಳುತ್ತದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2022-08-15 07:41 GMT
ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, Photo: twitter

ಹೊಸದಿಲ್ಲಿ: ಪ್ರಧಾನಿ ಮೋದಿ ತಮ್ಮ ಮಹತ್ವಾಕಾಂಕ್ಷೆಯ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್  ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ (Congress spokesperson Gaurav Vallabh ) ಇತ್ತೀಚೆಗೆ ಮೋದಿ ಸರಕಾರಕ್ಕೆ (Modi government )2022 ರ ಭರವಸೆಗಳ ಬಗ್ಗೆ ನೆನಪಿಸಿದ್ದಾರೆ .  2022 ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೆ ಮನೆ, ರೈತರ ಆದಾಯ 2022 ರ ವೇಳೆಗೆ ದ್ವಿಗುಣಗೊಳ್ಳಲಿದೆ.  2022 ರ ವೇಳೆಗೆ ಬುಲೆಟ್ ರೈಲುಗಳು ಕಾರ್ಯನಿರ್ವಹಿಸಲಿವೆ ಹಾಗೂ  ಆರ್ಥಿಕತೆಯು  5 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿರುತ್ತದೆ ಎಂಬ ಭರವಸೆ ನೆನಪಿಸಿದ್ದಾರೆ.

"ಈ ಸುಳ್ಳು ಭರವಸೆಗಳ ಸಂಸ್ಕೃತಿ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ? ಹೊಗೆ ಮತ್ತು ಕನ್ನಡಿಯ ಸಂಸ್ಕೃತಿಯನ್ನು ಬಳಸಿಕೊಂಡು 2022 ರ ವರ್ಷಕ್ಕೆ ನೀಡಿದ್ದ ಭರವಸೆಗಳ ಹೊಸ ಗಡುವನ್ನು ಪ್ರಧಾನಿ ನೀಡಲು ಹೊರಟಿದ್ದಾರೆಯೇ?" ಎಂದು ವಲ್ಲಭ್ ಪ್ರಶ್ನಿಸಿದರು.

2019 ರ ಲೋಕಸಭಾ ಚುನಾವಣೆಯ ಮೊದಲು  ಸ್ವಾತಂತ್ರ್ಯ ದಿನದ ಭಾಷಣದಲ್ಲಿ 2022 ರ ವೇಳೆಗೆ ಭಾರತವು ಕೈಯಲ್ಲಿ ರಾಷ್ಟ್ರಧ್ವಜದೊಂದಿಗೆ "ಮಗ ಅಥವಾ ಮಗಳನ್ನು" ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ ಎಂದು ಪ್ರಧಾನಿ ಹೇಳಿದ್ದರು.

2018 ರಲ್ಲಿ ಆಗಿನ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಅಹಮದಾಬಾದ್ ಮತ್ತು ಮುಂಬೈ ನಡುವೆ ಓಡುವ ಭಾರತದ ಮೊದಲ ಹೈಸ್ಪೀಡ್ ಬುಲೆಟ್ ರೈಲಿನ ಕನಸು ನನಸಾಗುವ ಸಮೀಪದಲ್ಲಿದೆ ಹಾಗೂ  ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯಾಚರಣೆಗಳು 2022 ರಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News