ಸ್ವಾತಂತ್ರ್ಯ ದಿನದ ಭಾಷಣಕ್ಕಾಗಿ ಟೆಲಿಪ್ರಾಂಪ್ಟರ್ ಬದಿಗಿಟ್ಟು ಪೇಪರ್ ನೋಟ್ಸ್ ಬಳಸಿದ ಪ್ರಧಾನಿ ಮೋದಿ

Update: 2022-08-15 11:26 GMT
Photo:ANI

 ಹೊಸದಿಲ್ಲಿ: ಈ ಬಾರಿಯ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi )ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಟೆಲಿಪ್ರಾಂಪ್ಟರ್  (teleprompter)ಬದಲಿಗೆ ಪೇಪರ್ ನೋಟ್ಸ್ ಗಳನ್ನು ಬಳಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಒಂಬತ್ತನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಆಝಾದಿ ಕಾ ಅಮೃತ್ ಮಹೋತ್ಸವದ (Azadi Ka Amrit Mahotsav)ಬ್ಯಾನರ್ ಅಡಿಯಲ್ಲಿ ದೇಶದಲ್ಲಿ ಆಚರಿಸಲಾಗುತ್ತಿರುವ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ದೇಶವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಪ್ರಧಾನಿ ಅವರು ತಮ್ಮ ಭಾಷಣವನ್ನು ಆರಂಭಿಸುತ್ತಿದ್ದಂತೆ ಟೆಲಿಪ್ರಾಂಪ್ಟರ್ ಅನ್ನು ಬದಿಗಿಡಲಾಯಿತು.

ಸಾಂಪ್ರದಾಯಿಕ ತ್ರಿವರ್ಣದ ಶಿರವಸ್ತ್ರ ಧರಿಸಿದ ಪ್ರಧಾನಿ ಮೋದಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಣನೀಯ ಕೊಡುಗೆ ನೀಡಿದ "ಮುಕ್ತ ಭಾರತದ ವಾಸ್ತುಶಿಲ್ಪಿ" ಗಳನ್ನು ನೆನಪಿಸಿಕೊಂಡರು.

"ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕ್ರೌರ್ಯ ವನ್ನು  ಎದುರಿಸದ ಒಂದು ವರ್ಷವೂ  ಇರಲಿಲ್ಲ. ಇಂದು ನಾವು ಅವರಿಗೆ ಗೌರವ ಸಲ್ಲಿಸುವಾಗ ಅವರ ದೂರದೃಷ್ಟಿ ಹಾಗೂ  ಭಾರತಕ್ಕಾಗಿ ಕನಸುಗಳನ್ನು ನೆನಪಿಸಿಕೊಳ್ಳಬೇಕಾಗಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News