ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಎಂ.ವಿ.ಹೆಗ್ಡೆ ಸಂಸ್ಮರಣೆ

Update: 2022-08-15 11:21 GMT

ಶಿರ್ವ : ಮಟ್ಟಾರು ವಿಠಲ ಹೆಗ್ಡೆ ಮಂಗಳೂರಿನ ನವ ಭಾರತ ಪ್ರತಿಕೆಯ ಸಂಪಾದಕೀಯ ವಿಭಾಗದಲ್ಲಿದ್ದು, ದಶಕಗಳ ಕಾಲ ಕರಾವಳಿಯಲ್ಲಿ  ಪತ್ರಿಕೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ಕನ್ನಡ ತುಳು ಹೋರಾಟದಲ್ಲಿ ಅಪಾರವಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಯನ್ನು ಅನುಭವಿಸಿದವರು ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಮಟ್ಟಾರು ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ ಸೋಮವಾರ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ತಾಲೂಕಿನ ಸ್ವಾತಂತ್ರ್ಯ ಸೇನಾನಿಗಳ ಸಂಸ್ಮರಣೆಯ ಅಮೃತಾಂಜಲಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ಪತ್ರಕರ್ತ, ಕನ್ನಡ -ತುಳು ಸಾಹಿತಿ ಮಟ್ಟಾರು ವಿಠಲ ಹೆಗ್ಡೆರವರಿಗೆ ನುಡಿ ನಮನ ಸಲ್ಲಿಸಿದರು.

ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಕಸಾಪ ಕಾಪು ತಾಲೂಕು ಘಟಕದ ವತಿಯಿಂದ ತಾಲೂಕಿನ ಸೇನಾನಿಗಳ ಸ್ಮರಣೆಯಲ್ಲಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸಂಪಾದಕತ್ವದಲ್ಲಿ ಸಂಗ್ರಹಿಸಿದ ಮಾಹಿತಿ ಕೈಪಿಡಿ ಅಮೃಂತಾಂಜಲಿ ಬಿಡುಗಡೆಗೊಳಿಸಿದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್, ಗ್ರಾಮ ಲೆಕ್ಕಾಧಿಕಾರಿ ವಿಜಯ, ಎಂ.ವಿ.ಹೆಗ್ಡೆಯವರ ಪುತ್ರ ಡಾ.ಸನತ್ ಹೆಗ್ಡೆ, ಪುತ್ರಿ ನಿವೃತ್ತ ಬ್ಯಾಂಕ್ ಅಧಿಕಾರಿ ಶೋಭಾ ಪಿ.ಶೆಟ್ಟಿ,  ದೇವದಾಸ್ ಹೆಬ್ಬಾರ್ ಕಟ್ಟಿಂಗೇರಿ, ಗ್ರಾ.ಪಂ. ಸದಸ್ಯರಾದ ದೇವದಾಸ್ ನಾಯಕ್, ಗೋಪಾಲ್ ನಾಯ್ಕ್, ನೆಕ್ಕರೆಕಂಬ್ಳ ಸುರೇಶ್ ನಾಯಕ್, ರಕ್ಷಿತ್ ಶೆಟ್ಟಿ ಅರಂತಡೆ, ವಕೀಲ ನಿತೇಶ್ ಶೆಟ್ಟಿ, ನಿತೀಶ್ ಮಟ್ಟಾರ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಗೌರವ ಕಾರ್ಯದರ್ಶಿ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಸದಸ್ಯ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯ ದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಯಕ್ಷಗಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿರವರ ನೇತೃತ್ವದಲ್ಲಿ ಎಂ.ವಿ.ಹೆಗ್ಡೆ ವಿರಚಿತ ದೇಶಭಕ್ತಿ ಭಾವದ ಯಕ್ಷಗಾನ ಸ್ವರಾಜ್ಯ ವಿಜಯ ಪ್ರಸಂಗದ ಆಯ್ದ ಪದ್ಯಗಳ ಗಾನವೈವ ಕಾರ್ಯಕ್ರಮ ನಡೆಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News