ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 13:44 GMT

ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಅಲ್ತಾಫ್ ಹಾಮದ್ ನೆರವೇರಿಸಿದರು.

ಖತೀಬ್ ಶರೀಫ್ ಅಝ್ಹರಿ ದುಆಗೈದರು, ಸದರ್ ಮುಅಲ್ಲಿಂ ಮುಹಮ್ಮದ್ ಅಲಿ ಅಸ್ಲಮಿ, ಮುಅದ್ಸಿನ್ ಇಬ್ರಾಹಿಂ ಝೈನಿ, ನಾಸಿರ್ ದಾರಿಮಿ, ಜಮಾಅತ್ ಉಪಾಧ್ಯಕ್ಷ ನಾಸಿರ್ ಮಲಾರ್, ಸದಸ್ಯರಾದ ಎನ್.ಸಲಾಂ , ಇರ್ಫಾನ್ ಡಿ., ರಝಾಕ್ ಜಿ, ರಿಝ್ವಾನ್ ಅರಸ್ತಾನ, ಮಜೀದ್ ಆರ್, ಆಸಿಫ್, ಝಕರಿಯ ಆರ್, ಎಂ.ಕೆ. ಕಮರುದ್ದೀನ್, ಎಂ.ಕೆ. ಸಮದ್, ಮಾಜಿ ಕೋಶಾಧಿಕಾರಿ ಮುಹಮ್ಮದ್, ನಝೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News