ಯುವ ಉದ್ಯಮಿ ಸತ್ಯಜಿತ್ ಕಾಮತ್ ನಿಧನ

Update: 2022-08-15 14:30 GMT

ಉಡುಪಿ, ಆ.15: ಯುವ ಉದ್ಯಮಿ, ಉಡುಪಿ ಕಾಮತ್ ಆ್ಯಂಡ್ ಕಂಪನಿಯ ಮಾಲಕ ಸುದರ್ಶನ್ ಕಾಮತ್‌ರ ಪುತ್ರ ಸತ್ಯಜಿತ್ ಕಾಮತ್ (42) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು.

ಇವರು ಗೋವಾಕ್ಕೆ ಕುಟುಂಬ ಸಮೇತ ಪ್ರಯಾಣ ಬೆಳೆಸಿದ್ದು, ಈ ವೇಳೆ ಎದೆನೋವು ಕಾಣಿಸಿಕೊಂಡು ತೀವ್ರ ಹೃದಯಘಾತಕ್ಕೆ ಒಳಗಾದರು.

ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News