ಕುದ್ರೋಳಿ: ತಿರಂಗಾ ಕಲಾಕೃತಿಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಶ್ಲಾಘನೆ

Update: 2022-08-15 16:51 GMT

ಮಂಗಳೂರು, ಆ.15: ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ 900 ಕಿಲೋ ಧವಸ ಧಾನ್ಯ ಹಾಗೂ ಪುಷ್ಪಗಳಿಂದ ರೂಪಿಸಿದ ತಿರಂಗಾ ಕಲಾಕೃತಿಯನ್ನು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೋಮವಾರ ವೀಕ್ಷಿಸಿ ಶ್ಲಾಘಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಹರ್ ಘರ್ ತಿರಂಗ ಅಭಿಯಾನ ಯಶಸ್ವಿಯಾಗಿದೆ. ಅದಕ್ಕೆ ಪೂರಕವಾಗಿ ಕುದ್ರೋಳಿ ಕ್ಷೇತ್ರದಲ್ಲಿ ದೇಶಾಭಿಮಾನ ಬಿಂಬಿಸುವ ತಿರಂಗಾ ಕಲಾಕೃತಿ ರೂಪಿಸಲಾಗಿದೆ. ಧವಸಧಾನ್ಯವನ್ನೇ ಬಳಸಿಕೊಂಡು ಕ್ರಿಯಾಶೀಲ ಮಾದರಿಯಲ್ಲಿ ತಿರಂಗಾ ರೂಪಿಸಿರುವುದು ಅಭಿನಂದನೀಯ ಎಂದರು.

ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News