ಕಾಸರಗೋಡು; ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು
Update: 2022-08-16 20:36 IST
ಕಾಸರಗೋಡು; ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಮಣಿಯಂಪಾರೆಯಲ್ಲಿ ನಡೆದಿದೆ.
ಚಲ್ಲಂಗಯ ಸಿ.ಜೆ ಮೂಲೆಯ ಅಬ್ದುಲ್ಲ ಎಂಬವರ ಪುತ್ರ ಜಸ್ವಾದ್ (17) ಮೃತ ಬಾಲಕ. ಸ್ನೇಹಿತರ ಜೊತೆ ಸ್ನಾನಕ್ಕಿಲಿದ ಸಂದರ್ಭದಲ್ಲಿ ನೀರು ಪಾಲಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಶೋಧ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.
ಈ ಕುರಿತು ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.