×
Ad

ಅರ್ಮೇನಿಯಾ : ಪಟಾಕಿ ಗೋದಾಮಿನಲ್ಲಿ ಸ್ಫೋಟ; 11 ಮಂದಿ ಮೃತ್ಯು

Update: 2022-08-16 22:47 IST

ಯೆರೆವಾನ್, ಆ.16: ಅರ್ಮೇನಿಯಾದ ಪಟಾಕಿ ಗೋದಾಮಿನಲ್ಲಿ ರವಿವಾರ ಸಂಭವಿಸಿದ ಸ್ಫೋಟದಲ್ಲಿ ಮೃತರ ಸಂಖ್ಯೆ 11ಕ್ಕೇರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅರ್ಮೇನಿಯಾ ರಾಜಧಾನಿ ಯೆರೆವಾನ್ನ ಶಾಪಿಂಗ್ ಮಾಲ್ನಲ್ಲಿದ್ದ ಪಟಾಕಿ ಗೋದಾಮಿನಲ್ಲಿ ರವಿವಾರ ಸ್ಫೋಟ ಸಂಭವಿಸಿದ್ದು ಕಟ್ಟಡದ ಒಂದು ಪಾರ್ಶ್ವಕ್ಕೆ ತೀವ್ರ ಹಾನಿಯಾಗಿದೆ.

 ಮೃತಪಟ್ಟವರ ಸಂಖ್ಯೆ 11ಕ್ಕೇರಿದ್ದು 62ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅರ್ಮೇನಿಯಾದ ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News