ಅಮುಲ್ ಹಾಲು ಇಂದಿನಿಂದ 2 ರೂಪಾಯಿ ತುಟ್ಟಿ

Update: 2022-08-17 01:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದ ಪ್ರಮುಖ ಹಾಲು ಸರಬರಾಜು ಸಂಸ್ಥೆಗಳಾದ ಅಮುಲ್ ಮತ್ತು ಮದರ್ ಡೈರಿ ಬುಧವಾರದಿಂದ ಜಾರಿಯಾಗವಂತೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿನಷ್ಟು ಹೆಚ್ಚಿಸಿವೆ.

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಕಾರಣ ನೀಡಿ ಬೆಲೆ ಏರಿಕೆ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಅಮುಲ್ ಮತ್ತು ಮದರ್ ಡೈರಿ ಹಾಲಿನ ದರ ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಉಭಯ ಸಂಸ್ಥೆಗಳು ಕಳೆದ ಮಾರ್ಚ್‍ನಲ್ಲಿ ದರವನ್ನು 2 ರೂಪಾಯಿ ಹೆಚ್ಚಿಸಿದ್ದವು.

ಅಮುಲ್ ಬ್ರಾಂಡ್‍ನಡಿ ಹಾಲು ಮತ್ತು ಹೈನು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿ ಗುಜರಾತ್‍ನ ಅಹ್ಮದಾಬಾದ್ ಮತ್ತು ಸೌರಷ್ಟ್ರ, ದೆಹಲಿ-ಎನ್‍ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಮತ್ತು ಇತರ ಮಾರುಕಟ್ಟೆಗಳಲ್ಲಿ ಆಗಸ್ಟ್ 17ರಿಂದ ದರ ಹೆಚ್ಚಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ದರ ಏರಿಕೆ ಗರಿಷ್ಠ ಮಾರಾಟ ಬೆಲೆಯ ಶೇಕಡ 4ರಷ್ಟಾಗಿದ್ದು, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆ ಎಂದು ಸಂಸ್ಥೆ ಪ್ರತಿಪಾದಿಸಿದೆ. ಹಾಲಿನ ಉತ್ಪಾದನೆ ಮತ್ತು ಒಟ್ಟಾರೆ ಕಾರ್ಯಾಚರಣೆ ವೆಚ್ಚ ಹೆಚ್ಚಿದ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಪಶು ಆಹಾರದ ಬೆಲೆ ಸುಮಾರು ಶೇಕಡ 20ರಷ್ಟು ಹೆಚ್ಚಿದೆ ಎಂದು ಪ್ರಕಟಣೆ ಹೇಳಿದೆ.

ಕೆನೆಭರಿತ ಹಾಲಿನ ದರ ಲೀಟರ್‌ಗೆ 59ರ ಬದಲಾಗಿ 61 ರೂಪಾಯಿ ಆಗಲಿದೆ. ಟೋನ್ಡ್ ಹಾಲಿನ ದರ ರೂ. 51, ಡಬಲ್ ಟೋನ್ಡ್ ಹಾಲಿನ ದರ 45 ರೂಪಾಯಿ ಆಗಲಿದೆ. ಹಸುವಿನ ಹಾಲಿನ ದರ 53 ರೂಪಾಯಿ. ಸಗಟು ಹಾಲಿನ ದರ ರೂಪಾಯಿಯನ್ನು 46 ರಿಂದ 48 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News