ಎಐಎಡಿಎಂಕೆ‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕ ಮಾನ್ಯವಲ್ಲ: ಮದ್ರಾಸ್‌ ಹೈಕೋರ್ಟ್

Update: 2022-08-17 07:29 GMT
Photo:PTI

ಚೆನ್ನೈ: ಎಐಎಡಿಎಂಕೆ ನಾಯಕ ಇ.  ಪಳನಿಸ್ವಾಮಿ ( AIADMK leader E Palaniswa) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರ ನೇಮಕವು ಮಾನ್ಯವಾಗಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಪಕ್ಷದ ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯವು ಜೂನ್ 23 ರಂದು ಯಥಾಸ್ಥಿತಿಗೆ ಆದೇಶಿಸಿದೆ.

ಪಕ್ಷದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಳನಿಸ್ವಾಮಿ ಹಾಗೂ  ಓ. ಪನ್ನೀರಸೆಲ್ವಂ ನಡುವಿನ ಭಾರೀ ಕಚ್ಚಾಟದ ನಡುವೆಯೇ ನ್ಯಾಯಾಲಯದ ಈ ತೀರ್ಪು ಬಂದಿದೆ. ಪಳನಿಸ್ವಾಮಿ ಅವರ ನೇಮಕದ ಮೊದಲು ಪಕ್ಷವು ಜಂಟಿ ನಾಯಕತ್ವದಲ್ಲಿತ್ತು.  ಪನ್ನೀರ್ ಸೆಲ್ವಂ ಸಂಯೋಜಕರಾಗಿದ್ದರೆ  ಪಳನಿಸ್ವಾಮಿ ಅವರು ಪನ್ನೀರ್ ಸೆಲ್ವಂ ಬಳಿಕದ ಸ್ಥಾನದಲ್ಲಿದ್ದರು.

ಪಳನಿಸ್ವಾಮಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ಜುಲೈನಲ್ಲಿ ನಡೆದ ಪಕ್ಷದ ಸಭೆಯು ಕಾನೂನುಬಾಹಿರ ಎಂದು ಪನ್ನೀರಸೆಲ್ವಂ ನ್ಯಾಯಾಲಯದಲ್ಲಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News