ಬಿಜೆಪಿ ಸಂಸದೀಯ ಮಂಡಳಿ : ಗಡ್ಕರಿಗೆ ಶಾಕ್, ಬಿಎಸ್‌ವೈ ಗೆ ಸ್ಥಾನ

Update: 2022-08-17 09:58 GMT

ಹೊಸದಿಲ್ಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು  ಬಿಜೆಪಿಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಿಂದ( parliamentary board) ಕೈಬಿಡಲಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದ ಸಂಸದೀಯ ಮಂಡಳಿಯಲ್ಲಿ ಸೇರಿಸಲಾಗಿದ್ದು, ಸದ್ಯ ಮಂಡಳಿಯು ಅನೇಕ ಹೊಸ ಮುಖಗಳನ್ನು ಹೊಂದಿದೆ.

ಸಂಸದೀಯ ಮಂಡಳಿಯು ಬಿಜೆಪಿಯಲ್ಲಿ(BJP) ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಇದು ಮುಖ್ಯಮಂತ್ರಿಗಳು(Chief Minister), ರಾಜ್ಯಗಳ ಮುಖ್ಯಸ್ಥರು ಮತ್ತು ಇತರ ಪ್ರಮುಖ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ನಿತಿನ್ ಗಡ್ಕರಿ(Nitin Gadkari) ಅವರನ್ನು ಪ್ರಮುಖ ಸಮಿತಿಯಿಂದ ಹೊರಗಿಟ್ಟಿರುವುದು ಪ್ರಮುಖ ಬದಲಾವಣೆ ಮಾತ್ರವಲ್ಲದೇ ಹಲವರಿಗೆ ಆಘಾತ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಸರ್ಕಾರದ ಅತ್ಯಂತ ಹಿರಿಯ ಸಚಿವರಲ್ಲಿ ಒಬ್ಬರಾದ ಗಡ್ಕರಿ ಬಿಜೆಪಿಯ ಮಾಜಿ ಮುಖ್ಯಸ್ಥರಾಗಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್(Rajnath Singh) ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಇದರ ಸದಸ್ಯರಾಗಿದ್ದಾರೆ. ಪಕ್ಷವು ತನ್ನ ಕೇಂದ್ರ ಚುನಾವಣಾ ಸಮಿತಿಯನ್ನು ಮರುಜೋಡಿಸಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಭೂಪೇಂದರ್ ಯಾದವ್, ಓಂ ಮಾಥುರ್ ಮತ್ತು ಅದರ ಮಹಿಳಾ ವಿಭಾಗದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಅವರನ್ನು ಒಳಗೊಂಡಿತ್ತು. ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೇನ್ ಮತ್ತು ಜುಯಲ್ ಓರಾಮ್ ಅವರನ್ನು ಸಿಇಸಿಯಿಂದ ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News