ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ: ವಿಮಾನಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಡಿಜಿಸಿಎ

Update: 2022-08-17 16:00 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್‌ ಪ್ರಕರಣಗಳಲ್ಲಿ ವ್ಯಾಪಕ ಹೆಚ್ಚಳ ಕಂಡುಬರುತ್ತಿರುವ ಕಾರಣ ವಿಮಾನ ಯಾನ ಸಂಸ್ಥೆಗಳಿಗೆ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) (DGCA) (Directorate General of Civil Aviation) ವಿಮಾನದೊಳಗೆ ಕೋವಿಡ್‌ ನಿಯಮಗಳನ್ನು(Covid Protocol) ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪ್ರತಿಯೊಬ್ಬರೂ ಮಾಸ್ಕ್‌ಧಾರಣೆ(Face Mak) ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ. 

ವಿಮಾನದಲ್ಲಿ ಪ್ರಯಾಣಿಸುವವರು ಎಲ್ಲಾ ಸಮಯಗಳಲ್ಲೂ ಮಾಸ್ಕ್‌ ಧರಿಸಬೇಕು ಮತ್ತಿ ವಿವಿಧದೆಡೆಗಳಲ್ಲಿ ಪ್ರಯಾಣಿಕರು ನೈರ್ಮಲ್ಯ ಪಾಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಪ್ರಯಾಣಿಕರು ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳೊಂದಿಗೆ ಕೇಳಿಕೊಂಡಿದೆ. 

ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಕೋವಿಡ್‌ ಪ್ರಕರಣದಲ್ಲಿ ಉಲ್ಬಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು indiatoday.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News