ದಲಿತ ಬಾಲಕ ಮೃತ್ಯು ಪ್ರಕರಣ: ಬೆಂಬಲ ಹಿಂಪಡೆಯುವ ಬೆದರಿಕೆ ಹಾಕಿದ ರಾಜಸ್ಥಾನ ಸಚಿವ

Update: 2022-08-18 06:01 GMT

ಜೈಪುರ: ಜಲೋರ್ ನಲ್ಲಿ ಮೃತಪಟ್ಟ ದಲಿತ ಬಾಲಕನ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ, ಬಿಎಸ್‌ಪಿಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ (Congress) ಸೇರ್ಪಡೆಗೊಂಡಿರುವ ಶಾಸಕರು ಸರ್ಕಾರಕ್ಕೆ ಬೆಂಬಲ ಹಿಂಪಡೆಯಲು ಹಿಂಜರಿಯುವುದಿಲ್ಲ ಎಂದು ರಾಜಸ್ಥಾನದ ಸಚಿವ ರಾಜೇಂದ್ರ ಗುಧಾ(Rajendra Gudha) ಬುಧವಾರ ಹೇಳಿದ್ದಾರೆ.

ಯಾವುದೇ ಅಪರಾಧದ ಘಟನೆಯನ್ನು ನಿರ್ದಿಷ್ಟ ಸಮುದಾಯದೊಂದಿಗೆ ಜೋಡಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರು ಹೇಳಿದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಟಿಕೆಟ್‌ನಲ್ಲಿ ಗೆದ್ದ ಆರು ಶಾಸಕರಲ್ಲಿ ಗುಧಾ ಒಬ್ಬರಾಗಿದ್ದರು. ಆದರೆ ನಂತರ ಅವರು ಕಾಂಗ್ರೆಸ್‌ಗೆ ಸೇರಿದರು.

"ಸತ್ಯವೆಂದರೆ (ದಲಿತ ವಿದ್ಯಾರ್ಥಿನಿ ಸಾವಿನ ಪ್ರಕರಣದಲ್ಲಿ) ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತು ದಲಿತ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ, ನಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗಿ ಬಂದರೂ ಸರಿ ನಾವೆಲ್ಲರೂ ಬೆಂಬಲ ಹಿಂಪಡೆಯುತ್ತೇವೆ" ಎಂದು ಗುಧಾ ಸುದ್ದಿಗಾರರಿಗೆ ತಿಳಿಸಿದರು. 

ಜಲೋರ್‌ನಲ್ಲಿ, ಒಂಬತ್ತು ವರ್ಷದ ದಲಿತ ವಿದ್ಯಾರ್ಥಿ ಇಂದ್ರ ಕುಮಾರ್‌ಗೆ ಜುಲೈ 20 ರಂದು ಶಾಲೆಯಲ್ಲಿ ನೀರಿನ ಪಾತ್ರೆಯನ್ನು ಮುಟ್ಟಿದ ಆರೋಪದ ಮೇಲೆ ಶಿಕ್ಷಕರೊಬ್ಬರು ಥಳಿಸಿದ್ದರು. ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಆಗಸ್ಟ್ 13 ರಂದು ಮೃತಪಟ್ಟಿದ್ದ. ಆರೋಪಿ ಶಿಕ್ಷಕ ಚೈಲ್ ಸಿಂಗ್ (40) ಎಂಬಾತನನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News