ಬಿಜೆಪಿ ನಾಯಕ ಶಾನವಾಝ್ ಹುಸೇನ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Update: 2022-08-22 08:21 GMT
ಶಾನವಾಝ್ ಹುಸೇನ್ (Photo: Twitter/@ANI)

ಹೊಸದಿಲ್ಲಿ: ಅತ್ಯಾಚಾರ ಆರೋಪ ಹೊರಿಸಿ ತಮ್ಮ ವಿರುದ್ಧ  ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರಿಗೆ ಎಫ್‍ಐಆರ್ ದಾಖಲಿಸಲು ಆದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಜೆಪಿ(BJP) ನಾಯಕ ಶಾನವಾಝ್ ಹುಸೇನ್(Shahnawaz Hussain) ಅವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.

ಎಫ್‍ಐಆರ್ ದಾಖಲಿಸಲು ನ್ಯಾಯಾಲಯ 2018ರಲ್ಲಿ ನೀಡಿದ ಆದೇಶದಲ್ಲಿ ಯಾವುದೇ ಅಸಮರ್ಥನೀಯತೆಯಿಲ್ಲ ಎಂದು ಹೇಳಿ ಆ ಆದೇಶ ಜಾರಿಗೆ ಇದ್ದ ಮಧ್ಯಂತರ ತಡೆಯಾಜ್ಞೆಯನ್ನು ಜಸ್ಟಿಸ್ ಆಶಾ ಮೆನನ್ ತೆರವುಗೊಳಿಸಿದರು.

ತನಿಖೆ ಮುಂದುವರಿಯಲಿ ಹಾಗೂ ಸಂಬಂಧಿತ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಮೂರು ತಿಂಗಳೊಳಗಾಗಿ  ವರದಿ ಸಲ್ಲಿಕೆಯಾಗಬೇಕು ಎಂದು ತನ್ನ ಆದೇಶದಲ್ಲಿ ದಿಲ್ಲಿ ಹೈಕೋರ್ಟ್ ಹೇಳಿದೆ.

2018ರಲ್ಲಿ ದಿಲ್ಲಿ ಮೂಲದ ಮಹಿಳೆಯೊಬ್ಬರು  ಶಾನವಾಝ್ ಹುಸೈನ್ ವಿರುದ್ಧ  ಅತ್ಯಾಚಾರ ಆರೋಪ ಹೊರಿಸಿದ್ದರು. ಜುಲೈ 7, 2018ರಲ್ಲಿ ಹುಸೇನ್ ವಿರುದ್ಧ ಎಫ್‍ಐಆರ್ ದಾಖಲಿಸಲು ಮೆಜಿಸ್ಟೀರಿಯಲ್ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಹುಸೈನ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರೂ ಅವರ ಅಪೀಲು ವಜಾಗೊಂಡಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News