10 ಮಕ್ಕಳನ್ನು ಹೆರುವ ಮಹಿಳೆಯರಿಗೆ 'ಮದರ್ ಹೀರೋಯಿನ್' ಬಿರುದು, ನಗದು ಬಹುಮಾನ ಘೋಷಿಸಿದ ಪುಟಿನ್

Update: 2022-08-18 11:57 GMT

ಮಾಸ್ಕೋ: ರಷ್ಯಾದಲ್ಲಿ ಜನನ ಪ್ರಮಾಣ ಇಳಿಮುಖವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಸೋವಿಯತ್ ಯುಗದ ಯೋಜನೆಯೊಂದನ್ನು ಮರು ಆರಂಭಿಸಿ ಆದೇಶ ಹೊರಡಿಸಿದ್ದಾರೆ.

ಇದರ ಪ್ರಕಾರ ದೇಶದಲ್ಲಿ 10 ಅಥವಾ ಹೆಚ್ಚಿನ ಮಕ್ಕಳನ್ನು ಹೆತ್ತು ಬೆಳೆಸುವ ಮಹಿಳೆಯರಿಗೆ `ಮದರ್ ಹೀರೋಯಿನ್' (Mother Heroine) ಬಿರುದು ನೀಡಿ ಗೌರವಿಸಲಾಗುವುದು. ಈ ಮಹಿಳೆಯರಿಗೆ ಒಂದು ಬಾರಿಯ ಪಾವತಿಯಾದ  1 ಮಿಲಿಯನ್ ರೂಬಲ್ಸ್ (ಅಂದಾಜು ರೂ 13 ಲಕ್ಷ) ದೊರೆಯಲಿದೆ. ಆದರೆ ಹತ್ತನೇ ಮಗುವಿಗೆ ಒಂದು ವರ್ಷ ಪೂರೈಸಿದ ನಂತರ ಈ ಹಣ ದೊರೆಯಲಿದೆ. ತಾಯಂದಿರ ಯಾವುದೇ ಮಕ್ಕಳು ಯುದ್ಧದಲ್ಲಿ ಉಗ್ರ ಕೃತ್ಯದಲ್ಲಿ ಅಥವಾ ತುರ್ತು ಪರಿಸ್ಥಿತಿ ವೇಳೆ ಸತ್ತರೂ ಅವರಿಗೆ ಈ ಬಿರುದು ದೊರೆಯಲಿದೆ.

ಈ ಯೋಜನೆಯನ್ನು  ಈ ಹಿಂದೆ 1944ರಲ್ಲಿ ಅಂದಿನ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್(Joseph stallin) ಆರಂಭಿಸಿದ್ದರು. ಎರಡನೇ ಜಾಗತಿಕ ಮಹಾಯುದ್ಧದ ನಂತರ ಜನಸಂಖ್ಯೆ ಕುಸಿದ ಕಾರಣ ಅವರು ಈ ಯೋಜನೆ ಹಮ್ಮಿಕೊಂಡಿದ್ದರು. ಮುಂದೆ 1991ರಲ್ಲಿ ಸೋವಿಯತ್ ಯುಗ ಅಂತ್ಯಗೊಂಡಾಗ ಈ ಯೋಜನೆಯೂ ಅಂತ್ಯಗೊಂಡಿತ್ತು.

ಈ ವರ್ಷಾರಂಭದಲ್ಲಿ ರಷ್ಯಾದ ಜನಸಂಖ್ಯೆ 4 ಲಕ್ಷದಷ್ಟು ಕುಸಿದು 145.1 ಮಿಲಿಯನ್ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News