ಪೋಟೊಗ್ರಫಿ ಸ್ಪರ್ಧೆ: ಕರ್ನಾಟಕದ ಐವರಿಗೆ ಬಹುಮಾನ
Update: 2022-08-18 18:09 IST
ಉಡುಪಿ, ಆ.18: ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ 'ಆಝಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಐವರು ಛಾಯಾಗ್ರಾಹಕರ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಳುಹಿಸಿದ ಛಾಯಾಚಿತ್ರಗಳಿಗೂ ಬಹುಮಾನ ಲಭಿಸಿದೆ.
ಉಡುಪಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಮೂಡಬಿದ್ರೆಯ ಮಾನಸ ಫೋಟೋಗ್ರಫಿಯಾ ರವಿ ಕೋಟ್ಯಾನ್, ಎಂ. ಜಿನೇಶ್ ಪ್ರಸಾದ್, ಬೆಂಗಳೂರಿನ ಸತೀಶ್ ಎಚ್. ಹಾಗೂ ಕೆ. ಶಿವು ಅವರ ಚಿತ್ರಗಳಿಗೆ ಪ್ರಶಸ್ತಿ ಪ್ರಾಪ್ತವಾಗಿದೆ.
ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾದ 75 ಚಿತ್ರಗಳ ಕಾಫಿ ಟೇಬಲ್ ಪುಸ್ತಕವನ್ನು ಹೊರತರಲಿದ್ದು, ಅದು ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಅಕಾಡೆಮಿ ತಿಳಿಸಿದೆ.