×
Ad

ಬಿಜೆಪಿ ಆಜ್ಞೆಯ ಮೇರೆಗೆ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ: ರಾಘವ್ ಚಡ್ಡಾ

Update: 2022-08-19 12:25 IST
Photo: twitter 

ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ(CBI)  ಇಂದು ಬೆಳಿಗ್ಗೆ ದಾಳಿ ನಡೆಸಿದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Aam Aadmi Party MP Raghav Chadha)ಅವರು ತಮ್ಮ ಪಕ್ಷದ ಸಹೋದ್ಯೋಗಿಯನ್ನು ಹೊಗಳಿದರು . ಸಿಸೋಡಿಯಾ ಅವರನ್ನು "ಶಿಕ್ಷಣ ಕ್ರಾಂತಿಯ ವೀರ" ಎಂದು ಕರೆದ ಚಡ್ಡಾ, ಬಿಜೆಪಿಯವರ ನಿರ್ದೇಶನದ ಮೇರೆಗೆ ಶೋಧ ನಡೆಸಲಾಗಿದೆ ಎಂದು ಆರೋಪಿಸಿದರು.

ದಾಳಿಯಲ್ಲಿ ಸಿಸೋಡಿಯಾ ಅವರ ವಿರುದ್ಧ ಏನೂ ಪತ್ತೆಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾಘವ್ ಚಡ್ಡಾ, ತಮ್ಮ ಪಕ್ಷದ ನಾಯಕರು ತನಿಖಾ ಸಂಸ್ಥೆಗೆ ಸಹಕರಿಸುತ್ತಾರೆ ಎಂದು ಹೇಳಿದರು.

"ದಿಲ್ಲಿ ಶಿಕ್ಷಣ ಮಾದರಿಯನ್ನು ಮೆಚ್ಚಿದ,  ಅಮೆರಿಕದ ಅತಿದೊಡ್ಡ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್‌ನ (The New York Times)ಮೊದಲ ಪುಟದಲ್ಲಿ ಸಿಸೋಡಿಯಾ ಫೋಟೋ ಕಾಣಿಸಿಕೊಂಡ ದಿನದಂದೇ  ಬಿಜೆಪಿಯ ಆಜ್ಞೆಯ ಮೇರೆಗೆ ಸಿಬಿಐ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ದಾಳಿ ನಡೆಸಿತು" ಎಂದು ಚಡ್ಡಾ ಟ್ವೀಟ್ ಮಾಡಿದ್ದಾರೆ.

"ಕಳೆದ ಎಂಟು ವರ್ಷಗಳಿಂದ ಹಲವಾರು ದಾಳಿಗಳನ್ನು ನಡೆಸಲಾಯಿತು.  ಆದರೆ ನಮ್ಮ ವಿರುದ್ಧ ಏನೂ ಕಂಡುಬಂದಿಲ್ಲ, ಅವರು ಈ ಬಾರಿಯೂ ಏನನ್ನೂ ಶೋಧಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News