×
Ad

ವಿದ್ಯಾರ್ಥಿಗಳ ಜಾತಿ ನಿಂದನೆಗೈದ ಆರೋಪದ ಮೇಲೆ ಪ್ರಾಂಶುಪಾಲೆ ವಿರುದ್ಧ ಎಫ್‍ಐಆರ್

Update: 2022-08-19 16:24 IST
www.secondarytrainingcollege.org/gallery.html

ಮುಂಬೈ: ವಿದ್ಯಾರ್ಥಿಗಳ ಜಾತಿ ನಿಂದನೆಗೈದ ಆರೋಪ ಹೊತ್ತಿರುವ ನಗರದ ಗವರ್ನ್‍ಮೆಂಟ್ ಆಫ್ ಮಹಾರಾಷ್ಟ್ರ ಸೆಕೆಂಡರಿ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲೆ(College Principal) ಊರ್ಮಿಳಾ ಪರಳಿಕರ್ ಅವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಾಂಶುಪಾಲೆಯ ವಿರುದ್ಧ ಐಪಿಸಿ ಸೆಕ್ಷನ್ 509 ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಪ್ರಾಂಶುಪಾಲೆ ತಮ್ಮ ವಿರುದ್ಧ ಜಾತಿ ನಿಂದನೆಗೈದಿದ್ದಾರೆ(Caste Remarks) ಹಾಗೂ ಪರಿಶಿಷ್ಟ ವಿಭಾಗದ ಇತರ ವಿದ್ಯಾರ್ಥಿಗಳ ವಿರುದ್ಧವೂ ಹೇಳಿಕೆ ನೀಡಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.

"ನನ್ನ ಮಾತು ಮತ್ತು ಬರವಣಿಗೆ ಶೈಲಿ ಗಮನಿಸಿದ ಪರಳಿಕರ್ ಮ್ಯಾಡಂ  ನನ್ನ ಊರಿನ ಬಗ್ಗೆ ಕೇಳಿದರು ಮತ್ತು ನಂತರ ನಾನು ಆದಿವಾಸಿಯೇ(Adivasi) ಎಂದು ಪ್ರಶ್ನಿಸಿದ್ದರು. ನನ್ನ ಗ್ರಾಮದ ಶಾಲೆಗಳ ಶಿಕ್ಷಕರು  ಹೀಗೆ ಮಾತನಾಡುವವರಾದರೆ  ನಾನು ಕೂಡ ನನ್ನ ವಿದ್ಯಾರ್ಥಿಗಳಿಗೆ ಆದಿವಾಸಿ ಭಾಷೆಯಲ್ಲಿಯೇ ಪಾಠ ಮಾಡುತ್ತೇನೆಯೇ ಎಂದು ಪ್ರಶ್ನಿಸಿದರು," ಎಂದು ದೂರುದಾರೆ ಆರೋಪಿಸಿದ್ದಾರೆ.

"ಪ್ರಾಂಶುಪಾಲೆ ಇತರ ವಿದ್ಯಾರ್ಥಿಗಳ ಮುಖಚರ್ಯೆಯ ಬಗ್ಗೆಯೂ ಮಾತನಾಡಿದರು, ನಾವು ಬಟ್ಟೆ ಧರಿಸುವ ರೀತಿ ಮತ್ತು ನಾವು ದುಪಟ್ಟಾ ಧರಿಸದೇ ಇರುವುದರ ಹಿಂದಿನ ಉದ್ದೇಶ. ಹೀಗೆ ಮಾಡಿ ಹುಡುಗರನ್ನು ಆಕರ್ಷಿಸಲು ಉದ್ದೇಶಿಸಿದ್ದೀರಾ ಎಂದು ಕೇಳಿದರು. ನಾವು ಧರಿಸುವ ಸಲ್ವಾರ್ ಅಥವಾ ಲೆಗ್ಗಿಂಗ್ಸ್ ಬದಲು ಡೆನಿಮ್ ಜೀನ್ಸ್(Denim Jeans) ಹಾಕುವಂತೆ ಹೇಳಿದ್ದಾರೆ ಹಾಗೂ ಇದು ದೇಹದ ಕೆಳಗಿನ ಭಾಗವನ್ನು ಎದ್ದು ಕಾಣುವಂತೆ ಮಾಡುತ್ತದೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದಾರೆ" ಎಂದು ದೂರುದಾರೆ ಆರೋಪಿಸಿದ್ದಾರೆ.

ಆದರೆ ಪ್ರಾಂಶುಪಾಲೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.

ಪ್ರಾಂಶುಪಾಲೆಯ ವಿರುದ್ಧ ಹಲವು ವಿದ್ಯಾರ್ಥಿಗಳು ಸಿಒಪಿಎಸ್ ವಿದ್ಯಾರ್ಥಿ ಸಂಘಟನೆಗೆ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾಗೆ(National Student Union of India) ದೂರಿದ ನಂತರ ಎಫ್‍ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News