ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಖಂಡಿಸಿದ ಯುಎಸ್ ಕಮಿಷನ್ ಆಫ್ ಇಂಟರ್ ನ್ಯಾಷನಲ್ ರಿಲಿಜಿಯಸ್ ಫ್ರೀಡಂ

Update: 2022-08-20 10:38 GMT
Photo: Twitter

ಹೊಸದಿಲ್ಲಿ: ಗುಜರಾತ್ ಗಲಭೆಯ ಸಂದರ್ಭ 2002 ರಲ್ಲಿ ನಡೆದ ಬಿಲ್ಕಿಸ್ ಬಾನು(Bilkis Bano) ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ಕ್ರಮವನ್ನು ಯುಎಸ್ ಕಮಿಷನ್ ಆಫ್  ಇಂಟರ್‍ನ್ಯಾಷನಲ್ ರಿಲಿಜಿಯಸ್ ಫ್ರೀಡಂ(USCIRF) ಖಂಡಿಸಿದೆ ಹಾಗೂ ಅವರ ಬಿಡುಗಡೆ ಅಸಮರ್ಥನೀಯ ಎಂದು ಹೇಳಿದೆ. ಈ ಕುರಿತು ಸಂಘಟನೆಯ ಉಪಾಧ್ಯಕ್ಷ ಅಬ್ರಹಾಂ ಕೂಪರ್ ಹೇಳಿಕೆ ನೀಡಿದ್ದಾರೆ.

ಸಂಘಟನೆಯ ಆಯುಕ್ತರಾದ ಸ್ಟೀಫನ್ ಶ್ನೆಕ್ ಪ್ರತಿಕ್ರಿಯಿಸಿ, ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಯಲ್ಲಿ ಶಾಮೀಲಾದವರಿಗೆ ದೊರಕುತ್ತಿರುವ ವಿನಾಯಿತಿಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಗುಜರಾತ್ ಗಲಭೆ ಸಂದರ್ಭ ನಡೆದ ಈ ಲೈಂಗಿಕ ಹಿಂಸೆಯ ಘಟನೆಯ ಅಪರಾಧಿಗಳನ್ನು ಈ ರೀತಿ ಬಿಡುಗಡೆಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸಿದಂತೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಟ ಅನಿರುದ್ಧ್​ಗೆ ಕಿರುತೆರೆಯಿಂದ 2 ವರ್ಷ ನಿಷೇಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News