ಗೆಳೆಯನೊಂದಿಗಿದ್ದ ಯುವತಿಯನ್ನು ವಿವಸ್ತ್ರಗೊಳಿಸಿ ಹಲ್ಲೆ: ಇಬ್ಬರು ಅಪ್ರಾಪ್ತರು ಸೇರಿ ಐವರ ಬಂಧನ

Update: 2022-08-20 12:35 GMT
Photo: The Print

ಲಕ್ನೋ: ಉತ್ತರ ಪ್ರದೇಶದ ಹಮೀಪುರದ ನಗರ ಅರಣ್ಯ ಪ್ರದೇಶದಲ್ಲಿ ಗೆಳೆಯನೊಂದಿಗಿದ್ದ ಯುವತಿಯನ್ನು ಆರು ಮಂದಿ ಬಲವಂತವಾಗಿ ವಿವಸ್ತ್ರಗೊಳಿಸಿ, ಥಳಿಸಿ, ವೀಡಿಯೊ ಚಿತ್ರೀಕರಿಸಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪ್ರಕರಣದ ಆರು ಮಂದಿ ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ಜೋಡಿಯಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಜೊತೆಗಿದ್ದ ಯುವಕನಿಗೂ ಥಳಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಘಟನೆಯ ವೀಡಿಯೊಗಳು ವೈರಲ್ ಆದ ನಂತರ ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಬಂದಾ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಪಿನ್ ಮಿಶ್ರಾ, ವೀಡಿಯೊಗಳಲ್ಲಿನ ದುಷ್ಕರ್ಮಿಗಳು ಇನ್ನೂ ಅಪರಿಚಿತ ಸಂತ್ರಸ್ತೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಮತ್ತು ಅವರಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

“ಅವರು ಜೋಡಿಯಿಂದ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇದು ನಗರ ಅರಣ್ಯ ಪ್ರದೇಶವಾಗಿದ್ದು, ನಿರ್ಬಂಧಿತವಾಗಿದೆ. ಪೊಲೀಸರು ನಿರಂತರವಾಗಿ ಇಲ್ಲಿ ಸುತ್ತುತ್ತಾರೆ. ಯಾರಾದರೂ ಅಕ್ರಮವಾಗಿ ಇಲ್ಲಿಗೆ ಬಂದರೆ, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಘಟನೆ ಯಾವಾಗ ಸಂಭವಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದು ಕನಿಷ್ಠ ಒಂದು ಅಥವಾ ಎರಡು ದಿನಗಳ ಹಳೆಯ ವಿಡಿಯೋ ಎಂದು ಪೊಲೀಸರು ನಂಬಿದ್ದಾರೆ. ಅವರು ಪ್ರಕರಣದ ಸಂತ್ರಸ್ತರನ್ನು ಇನ್ನೂ ಪತ್ತೆ ಹಚ್ಚಿಲ್ಲ, ಅದಾಗ್ಯೂ, ಅತ್ಯಾಚಾರದ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.

ಪ್ರಕರಣದಲ್ಲಿ ಬಂಧಿತರಾದ ಐವರಲ್ಲಿ ಇಬ್ಬರು ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರನೇ ಆರೋಪಿಯನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.

 ನಿರ್ಬಂಧಿತ ಪ್ರದೇಶದಲ್ಲಿ ಪೊಲೀಸ್ ಪಿಕೆಟ್ ಅನ್ನು ಶಾಶ್ವತ ಆಧಾರದ ಮೇಲೆ ಇರಿಸಲಾಗಿದೆ ಮತ್ತು ಇದು ಪ್ರತಿ 2-3 ಗಂಟೆಗಳಿಗೊಮ್ಮೆ ಸುತ್ತುತ್ತದೆ. ನಾವು ಅಂತಹ ಅಪರಾಧಗಳನ್ನು ಸಂಪೂರ್ಣವಾಗಿ ನಿಗ್ರಹಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲಾ ಆರು ಶಂಕಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 “ಸಂತ್ರಸ್ತ ಮಹಿಳೆ ಯಾವುದೇ ದೂರು ನೀಡಿಲ್ಲ ಮತ್ತು ಆಕೆ ಮುಂದೆ ಬಂದು ತನ್ನನ್ನು ಗುರುತಿಸಿಕೊಂಡಿಲ್ಲ. ಇದು ದುರ್ಘಟನೆಯ (ಅತ್ಯಾಚಾರ) ಪ್ರಕರಣವಾಗಿದ್ದರೆ, ನಮ್ಮ ಈವರೆಗಿನ ಮಾಹಿತಿಯ ಪ್ರಕಾರ, ವೀಡಿಯೊ 1-2 ದಿನಗಳ ಹಳೆಯದಾದ ಕಾರಣ ಅದು ಅರಿವಿಗೆ ಬರುತ್ತಿತ್ತು, ”ಎಂದು ಅವರು ಹೇಳಿದ್ದಾರೆ. ವಿಡಿಯೋ ಆಧರಿಸಿ ಐವರನ್ನು ಬಂಧಿಸಲಾಗಿದೆ. ಅವರು ಐವರಲ್ಲಿ ಮೂವರನ್ನು ಕನ್ಹಯ್ಯಾ, ಅರವಿಂದ್ ನಿಶಾದ್ ಮತ್ತು ಪ್ರೀತಮ್ ಕಶ್ಯಪ್ ಎಂದು ಗುರುತಿಸಿದ್ದಾರೆ. ಇತರ ಇಬ್ಬರು ಬಾಲಾಪರಾಧಿಗಳು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News