ಕೆಸಿಎಫ್ ಬಹರೈನ್ ವತಿಯಿಂದ ಭಾರತದ ʼಆಝಾದಿ ಕಾ ಅಮೃತ್ ಮಹೋತ್ಸವ್ʼ ಕಾರ್ಯಕ್ರಮ

Update: 2022-08-21 16:17 GMT

ಬಹರೈನ್; ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ ಸ್ವಾತಂತ್ರ್ಯದ ಆಝಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವು ಆ.19ರಂದು ರಾತ್ರಿ 8 ಗಂಟೆಗೆ  ಅಲ್ ಹಿಲಾಲ್ ಆಡಿಟೋರಿಯಂ ಸಲ್ಮಾಬಾದ್ ಬಹರೈನ್ ನಲ್ಲಿ ಕೆಸಿಎಫ್ ನೇತಾರ ಅಲಿ ಮುಸ್ಲಿಯಾರ್ ಕೊಡಗು ಅವರ ದುಅದೊಂದಿಗೆ ಆರಂಭಗೊಂಡಿತು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ವಿಭಾಗದ  ಅಧ್ಯಕ್ಷರಾದ ಸಿಎಚ್ ಮುಹಮ್ಮದ್ ಅಲಿ ಸಖಾಫಿ ಮುಖ್ಯ ಪ್ರಭಾಷಣಗೈದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಂಘ ಬಹರೈನ್ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಸೇಕ್ರೆಡ್ ಹಾರ್ಟ್ ಕ್ಯಾಥೋಲಿಕ್ ಚರ್ಚ್ ಮನಾಮ ಇದರ ಪ್ರಭಾರಿ ಸಹಾಯಕ ಅರ್ಚಕರಾದ ಫಾ. ಡೇರಲ್ ಫೆರ್ನಾಂಡಿಸ್ ಕಪುಚಿನ್, ಅಂತರ್ ರಾಷ್ಟ್ರೀಯ ಟೋಸ್ಟ್ ಮಾಸ್ಟರ್  ಬಹರೈನ್ ಐ ವಿಭಾಗದ  ನಿರ್ದೇಶಕರಾದ DTM ರೋಷನ್ ಲೆವಿಸ್  ಹಾಗೂ ಕೆಸಿಎಫ್ ಬಹರೈನ್ ಉರ್ದು ವಿಂಗ್ ನೇತಾರರಾದ ಗಯಾಝುದ್ದೀನ್ ಮೈಸೂರು, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ಕಾರ್ಯಕ್ರಮ ದಲ್ಲಿ ಶುಭಾಸಂಸನೆ ಗೈದರು.

ಪ್ರಸ್ತಾವಿಕ ಭಾಷಣ ಮಾಡಿದ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವತಂತ್ರ್ಯ ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ  ಕೆಸಿಎಫ್ ಬಹರೈನ್ ರಾಷ್ಟ್ರೀಯ ನಾಯಕರು,  ಝೋನ್ ಸೆಕ್ಟರ್ ಗಳ ನಾಯಕರು ಮತ್ತು ಸದಸ್ಯರು ಭಾಗವಹಿಸಿದರು. ಕೆಸಿಎಫ್ ಬಹರೈನ್ ಪಬ್ಲಿಕೇಷನ್ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಸ್ವಾಗತಿಸಿ, 
ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಲತೀಫ್ ಪೇರೋಲಿ ಕಾರ್ಯಕ್ರಮ ನಿರೂಪಿಸಿದರು.

ಸಾಂತ್ವನ ವಿಂಗ್ ಚೇರ್ಮನ್ ಇರ್ಫಾನ್ ಮೇಲ್ಕಾರ್ ವಂದಿಸಿ, ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಸಮದ್ ಉಜಿರೆಬೆಟ್ಟು ರಾಷ್ಟ್ರಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News