ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ದೆಹಲಿ ವಾಯುಸಾರಿಗೆ ನಿಯಂತ್ರಕ!
ಹೊಸದಿಲ್ಲಿ: ಮೂವರು ಪೈಲಟ್‍ಗಳು ಮಾದಕ ವಸ್ತು ಸೇನೆ ಮಾಡಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ದೆಹಲಿ ವಾಯು ಸಾರಿಗೆ ನಿಯಂತ್ರಕರೊಬ್ಬರು ಸೈಕೋಆ್ಯಕ್ಟಿವ್ ಮಾದಕವಸ್ತು ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ಡಿಜಿಸಿಎ (DGCA) ಮೂಲಗಳು ಹೇಳಿವೆ.
ವಿಮಾನ ಸಿಬ್ಬಂದಿ ಮತ್ತು ಎಟಿಸಿಗಳನ್ನು ಪರೀಕ್ಷೆಗೆ ಗುರುಪಡಿಸುವ ನಿಯಮಾವಳಿ 2022ರ ಜನವರಿಯಲ್ಲಿ ಬೆಳಕಿಗೆ ಬಂದ ಬಳಿಕ ವಾಯು ಸೇವಾ ನಿಯಂತ್ರಕರೊಬ್ಬರು ಸಿಕ್ಕಿಹಾಕಿಕೊಂಡಿರುವುದು ಇದೇ ಮೊದಲು.
ಇಂದಿಗಾರಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯುಕ್ತರಾಗಿರುವ ಎಟಿಸಿಗಳನ್ನು ಡ್ರಗ್ ಪರೀಕ್ಷೆಗೆ ಗುರಿಪಡಿಸಲಾಗುತ್ತಿದೆ. ಆಗಸ್ಟ್ 18ರಂದು ಪಡೆದ ದೃಢೀಕರಣ ಪರೀಕ್ಷೆಯಲ್ಲಿ ಎಟಿಸಿ ಸಿಕ್ಕಿಹಾಕಿಕೊಂಡಿದ್ದು, ತಕ್ಷಣವೇ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾದಕ ವಸ್ತು ಪರೀಕ್ಷಾ ನಿಯಮಾವಳಿ ಜಾರಿಗೆ ಬಂದ ಬಳಿಕ ಬೇರೆ ಬೇರೆ ಏರ್‍ಲೈನ್ಸ್ ಕಂಪನಿಗಳಿಗೆ ಸೇರಿದ ಮೂವರು ಪೈಲಟ್‍ಗಳು ಸಿಕ್ಕಿಹಾಕಿಕೊಂಡಿದ್ದಾರೆ. ಡಿಜಿಸಿಎ ನಿಬಂಧನೆಗಳಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ndtv.com ವರದಿ ಮಾಡಿದೆ.